ಶಾಸಕ ಕೈಯಲ್ಲಿ ಚೇಳು ಹಿಡಿದು ಜಾತ್ರೆ ಮಾಡಿದ್ದು ಏಕೆ?

ಮಂಗಳವಾರ, 6 ಆಗಸ್ಟ್ 2019 (14:11 IST)
ಜನಪ್ರತಿನಿಧಿಯೊಬ್ಬರು ಕೈಯಲ್ಲಿ ಚೇಳು ಹಿಡಿದು ಹಬ್ಬ ಆಚರಣೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಕೊಂಡೆಮಾಯಿ ಜಾತ್ರೆಯಲ್ಲಿ ಶಾಸಕ ನಾಗನಗೌಡ ಕಂದಕೂರ  ಚೇಳು ಹಿಡಿದರು.

ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ನಾಗರ ಪಂಚಮಿಯಂದು ಗ್ರಾಮ ದೇವತೆ ಕೊಂಡ್ಯೆಮ್ಮಾಯಿ ದೇವಸ್ಥಾನದ ಚೇಳು ಹಿಡಿದರು.

ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಗ್ರಾಮ ದೇವತೆ ಕೊಂಡ್ಯೆಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಸಡಗರದಿಮದ ಜರುಗಿತು. ಇಲ್ಲಿನ ಬೆಟ್ಟದ ಮೇಲಿರುವ ಚೇಳಿನ ವಿಗ್ರಹವೇ ಗ್ರಾಮದ ಗ್ರಾಮದೇವತೆಯಾಗಿದೆ. ಚೇಳನ್ನು ಪೂಜಿಸುವ ಏಕೈಕ ಗ್ರಾಮವಾಗಿರುವುದರಿಂದ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಗ್ರಾಮದೇವತೆಯ ಜಾತ್ರೆಯಾದುದರಿಂದ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನೆಲೆಗೊಂಡಿದೆ. ಬೆಳಗ್ಗೆಯಿಂದ ಗ್ರಾಮದ ಜನರು ನೈವೇದ್ಯಗಳೊಂದಿಗೆ ದರ್ಶನಕ್ಕೆ ಆಗಮಿಸುವುದು, ಸುತ್ತಲಿನ ಗ್ರಾಮಸ್ಥರೂ ಚೇಳನ್ನು ಹಿಡಿಯುವ ಹಾಗೂ ದೆವತಾ ದರ್ಶನಕ್ಕೆ ತಂಡೋಪ ತಂಡಗಳಾಗಿ ಆಗಮಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ