ಡಿಜೆ ಹಳ್ಳಿ ಮತ್ತು ಶಿವಾಜಿನಗರದ ಸೈಯದ್ ಮೊಯಿನುದ್ದೀನ್, ಅರ್ಬಾಜ್, ಅದ್ನಾನ್ ಹಾಗೂ ಅರ್ಫಾತ್ ಬಂಧಿತರು. ಆರೋಪಿಗಳಿಂದ ಹಲ್ಲೆಗೊಳಗಾದ ಶಿವಾಜಿನಗರದ ರೌಡಿಶೀಟರ್ ಮನ್ಸೂರ್ ಅಲಿಯಾಸ್ ದೂನ್ ಗಂಭೀರವಾಗಿ ಗಾಯಗೊಂಡಿದ್ದಾನೆ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೆÇಲೀಸರು ಆಸ್ಪತ್ರೆಯಲ್ಲಿದ್ದಾರೆ.
ಹಲ್ಲೆಗೊಳಗಾಗಿರುವ ರೌಡಿಶೀಟರ್ ಮನ್ಸೂರ್ ವಿರುದ್ಧ ನಾನಾ ಪೆÇಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೆಣ್ಣೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಸೇರಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ. ರಂಜಾನ್ ಹಬ್ಬದ ವೇಳೆ ಮನ್ಸೂರ್ ಬಂಧಿತ ಆರೋಪಿ ಮೊಯಿನುದ್ದೀನ್ ಮೇಲೆ ಹಲ್ಲೆ ನಡೆಸಿದ್ದ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮೊಯಿನುದ್ದೀನ್ ದ್ವೇಷ ಸಾಧಿಸುತ್ತಿದ್ದ.
ನ.27ರಂದು ಮನ್ಸೂರ್ ತನ್ನ ಬೈಕ್ ಅನ್ನು ಸರ್ವೀಸ್ ಮಾಡಿಸಲು ಶಿವಾಜಿನಗರದ ಗ್ಯಾರೇಜ್‍ಗೆ ಬಿಟ್ಟಿದ್ದ. ಇದೇ ಗ್ಯಾರೇಜ್‍ನಲ್ಲಿ ಮೊಯಿನುದ್ದೀನ್ ಕೆಲಸ ಮಾಡುತ್ತಿದ್ದ. ಮನ್ಸೂರ್ ಗ್ಯಾರೇಜ್‍ಗೆ ಬಂದಾಗಿನಿಂದ ಹೋಗುವವರೆಗೂ ಅವನನ್ನೇ ಗಮನಿಸಿ, ಮೊಯಿನುದ್ದೀನ್ ತನ್ನ ಸಹಚರರ ಜತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಮನ್ಸೂರ್ ತನ್ನ ಪತ್ನಿಯ ಜತೆ ಬೈಕ್‍ನಲ್ಲಿ ಹೋಗುವುದನ್ನೇ ಕಾದು ಪತ್ನಿಯ ಎದುರಿಗೆ ಮನ್ಸೂರ್‍ಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು.