ಪತಿ ಗಂಡಸಲ್ಲವೆಂದು ಪತ್ನಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಭೂಪ

ಮಂಗಳವಾರ, 7 ಮಾರ್ಚ್ 2017 (12:53 IST)
ಪತಿ ಗಂಡಸಲ್ಲವೆಂದು ಪತ್ನಿ ಹೇಳಿದ್ದರಿಂದ ಮನನೊಂದ ಪತಿಯೊಬ್ಬ ವಾಟರ್ ಟ್ಯಾಂಕ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
 
ನಗರದ ಗಾಯಿತ್ರಿಪುರಂ ಬಡಾವಣೆಯ ನಿವಾಸಿಯಾದ ಅರುಣ್ ರಾವ್, ಮೈಸೂರಿನ ಡಿಸಿ ಕಚೇರಿ ಬಳಿ ಇರುವ  ವಾಟರ್ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
 
ನಾನು ಗಂಡಸು ಅಲ್ಲವೆಂದು ಪತ್ನಿ ಅಪಮಾನಿಸುತ್ತಾಳೆ. ಆಕೆಯ ಮನೆಯವರು ಕೂಡಾ ಪ್ರತಿನಿತ್ಯ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದರೂ ಪತ್ನಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರುಣ್ ರಾವ್ ವಿಚಾರಣೆಯಲ್ಲಿ ತಿಳಿಸಿದ್ದಾನೆ.
 
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಲಕ್ಷ್ಮಿಪುರಂ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಅರುಣ್ ರಾವ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ