ಪಂಚರಾಜ್ಯ ಎಲೆಕ್ಷನ್ ಬಳಿಕ ಬಿಜೆಪಿಗೆ ಬಲ ಬಂತಾ....?

geetha

ಗುರುವಾರ, 8 ಫೆಬ್ರವರಿ 2024 (17:00 IST)
ನವದೆಹಲಿ-ಕಾAಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟವೂ ಮುನ್ನಲೆಗೆ ಬಂದು ಒಂದಷ್ಟು ಮೀಟಿಂಗ್‌ಗಳು ಮೈತ್ರಿಕೂಟದ ನಾಯಕರ ಮಧ್ಯೆ ನಡೆದು ಹೋದರೂ, ಆ ಕಡೆಗೆ ಪಂಚರಾಜ್ಯಗಳ ಚುನಾವಣೆಯ ಬಳಿಕ ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ಮೇಲೆ ಶಾಕ್ ಎದುರಾಗ್ತಾ ಇದೆ. ಎನ್‌ಡಿಎಗೇ ಇದೀಗ ಅನಾಯಾಸವಾಗಿ ಚುನಾವಣೆಯನ್ನು ಎದುರಿಸುವ ಆಶಾವಾದ ಸಿಕ್ಕಿದೆ... ಯಾಕಂದ್ರೆ ದೇಶದಲ್ಲಿ ಕಾಂಗ್ರೆಸ್ ತನ್ನ ಹಳ್ಳವನ್ನು ತಾನೆ ತೊಡಿಕೊಂಡಿದೆಯಾ ಅನ್ನುವ ಸಂಶಯ ಎದುರಾಗ್ತಾ ಇದೆ... ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಲು, ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಸಿಕ್ಕ ಅಭೂತಪೂರ್ವ ವಿಜಯದಿಂದ ಮಹಾಘಟಬಂಧನ್ ಕೂಟವೂ ಅಕ್ಷರಶಃ ಕಂಗಾಲಾಗಿ ಹೋಗಿತ್ತು.

ಮೋದಿ ಎಂಬ ಅಶ್ವಮೇಧಕುದುರೆಯನ್ನು ಕಟ್ಟಿ ಹಾಕಲು ಮಹಾಗಟಬಂಧನ್ ಕೋಟೆಯನ್ನು ಬಲಿಷ್ಠಗೊಳಿಸಲು ಮೊದಲು ಅಖಾಡಕ್ಕೆ ಇಳಿದಿದ್ದೆ ತೆಲಂಗಾಣದ ಕೆಸಿಆರ್, ಮತ್ತು ಬಿಹಾರದ ಸಿಎಂ ನಿತೀಶ್‌ಕುಮಾರ್. ಆದರೆ ವಾಸ್ತವ ಕಣ್ಣ ಮುಂದೇ ಬೇರೆಯೇ ಇದೆ. ಈ ಕಡೆಗೆ ಪಂಚರಾಜ್ಯಗಳ ಎಲೆಕ್ಷನ್‌ನ ಅಖಾಡದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ. ತೆಲಂಗಾಣದಲ್ಲಿ ಸೋತ ಕೆಸಿಆರ್ ಪಾರ್ಟಿ ಇದೇ ಕಾಂಗ್ರೆಸ್ ಮುಂದೇ ಮಂಡಿಯೂರಿತ್ತು.. ಆರಂಭದಲ್ಲಿ ಮೈತ್ರಿಕೂಟದ ಭಾಗವಾಗಿದ್ದ ಕೆಸಿಆರ್ ಬರ್ತಾ ಬರ್ತಾ ಸ್ವತಂತ್ರ ನಡೆಯ ಕಡೆಗೆ ವಾಲಿ ಫೈನಲೀ ಇವರೇ ಅತಂತ್ರವಾಗಿದ್ದಾರೆ.

ಆದ್ರೆ ಇಂಡಿಯಾ ಮೈತ್ರಿಕೂಟದ ಮೈನ್ ಫಿಲ್ಲರ್ ಆಗಿದ್ದ ನಿತೀಶ್ ಅಚಾನಕ್ ಎಂಬAತೆ ಜಂಪಿAಗ್ ಸ್ಠಾರ್ ಆಗಿದ್ದೇ, ಮಹಾಘಟಬಂಧನ್ ಹೋಳಾಗಿ ಹೋಗ್ತಿದೆ.ಈಗಾಗಲೇ ನಿತೀಶ್ ಎನ್‌ಡಿಯ ಸಖ್ಯ ಬೆಳಿಸಿ ಆಗಿದೆ. ಅಲ್ಲಿಗೆ ಬಿಹಾರದ ೪೦ ಲೋಕಸಭಾ ಕ್ಷೇತ್ಗಳಲ್ಲಿ ಮೋದಿಯ ಸುನಾಮಿ ಅಲೆಯನ್ನು ತಡೆದು ನಿಲ್ಲಿಸೋದು ಕನಸ್ಸಿನ  ಮಾತೇ ಆಗಿದೆ ಕಾಂಗ್ರೆಸ್‌ನ ಇಂಡಿಯಾ ಮೈತ್ರಿಕೂಟಕ್ಕೆ,ಆದರೂ ಕಾಂಗ್ರೆಸ್ ನಾಯಕರೂ ನಿತೀಶ್ ಹೋದರೇ ಹೋಗಲಿ ನಾವಿನ್ನು ಬಲಷ್ಠರು ಅಂತ ಪುಂಕಾನುಪುAಕಾವಾಗಿ ಏನೇನು ಹೇಳುತ್ತಾ ಬರ್ತಾ ಇದೆ... ಆದ್ರೆ ಏನು ಹೇಳಿದರೇ ಏನು ಆರಂಭವೇ ಸರಿಯಲ್ಲ ಅಂದ ಮೇಲೆ ಎಂಡ್ ಕಥೆ ಏನಾಗುತ್ತೇ ನೀವೆ ಊಹಿಸಿಕೊಳ್ಳಿ....!?

ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ಮೇಲೆ ಶಾಕ್ ಆಗ್ತಾ ಇರೋದಂತು ಸತ್ಯ... ಬಂದವರು ಬಂದ ದಾರಿಗೆ ಸುಂಕವಿಲ್ಲ ಅಂತ ತಟಸ್ಥ ನಿಲುವು ತಾಳಲೋ ಇಲ್ಲ ಮೋದಿಯ ಅಲೆಗೆ ಬೆರಗಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಲೂ, ಒಟ್ಟಿನಲ್ಲಿ ಪರ್ಯಾಯ ರಾಜಕೀಯ ಆಟದ ಕಡೆಗೆ ಚಿತ್ತವನ್ನು ನೆಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ