ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ಎರಚಿದ ಸಹಕಲಾವಿದ

ಭಾನುವಾರ, 20 ಮಾರ್ಚ್ 2022 (10:06 IST)
ಬೆಂಗಳೂರು: ಒಂದೇ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಆಸಿಡ್ ಎರಚಿದ ಘಟನೆ ನಗರದಲ್ಲಿ ನಡೆದಿದೆ.

51 ವರ್ಷದ ದೇವಿ ಎಂಬ ಕಲಾವಿದೆ ತನ್ನ ಇಬ್ಬರು ಮಕ್ಕಳೊಂದಿಗೆ ನಂದಿನಿ ಲೇಔಟ್ ಬಳಿ ವಾಸ ಮಾಡುತ್ತಾರೆ. ರಾತ್ರಿ ಶೆಕೆ ಎನ್ನುವ ಕಾರಣಕ್ಕೆ ಮನೆ ಬಾಗಿಲು ತೆರೆದು ಮಲಗಿದ್ದ ದೇವಿ ಅವರ ಮೇಲೆ ಬೆಳಗಿನ ಜಾವ ಮನೆಗೆ ನುಗ್ಗಿದ ಆರೋಪಿ ಆಸಿಡ್ ಎರಚಿ ಪರಾರಿಯಾಗಿದ್ದಾನೆ.

ತೀವ್ರ ಸುಟ್ಟ ಗಾಯಕ್ಕೊಳಗಾದ ದೇವಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದೇ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ವೈಮನಸ್ಯವಿದ್ದಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ