ಪತ್ನಿ ಜೊತೆ ಹೋಳಿ ಆಡಲು ಹೊರಟಿದ್ದ ಗೆಳೆಯನ ರಕ್ತದೋಕುಳಿ ಹರಿಸಿದ ಪತಿ
ಇಬ್ಬರು ಸ್ನೇಹಿತರು ತಮ್ಮ ಸಹಚರರೊಂದಿಗೆ ಮದ್ಯಪಾನ ಮಾಡಿದ್ದರು. ಹಬ್ಬದ ಹುರುಪು ಜೊತೆಗೆ ಮದ್ಯದ ಅಮಲಿನಲ್ಲಿ ಗೆಳೆಯ ನಿನ್ನ ಹೆಂಡತಿ ಜೊತೆ ಹೋಳಿ ಹಬ್ಬ ಆಚರಿಸಬೇಕು ಎಂದು ಹೇಳಿದಾಗ ಪತಿಯ ಕೋಪ ನೆತ್ತಿಗೇರಿತ್ತು.
ಈ ಸಂಬಂಧ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಇದೇ ಕೋಪದಲ್ಲಿ ಆರೋಪಿ ಪತಿ ಗೆಳೆಯನ ಮೇಲೆ ಗನ್ ನಿಂದ ಶೂಟ್ ಮಾಡಿದ್ದ. ತಕ್ಷಣವೇ ಸಂತ್ರಸ್ತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.