ತಾಳಿಗೆ ಕೊರಳೊಡ್ಡಬೇಕಿದ್ದವಳು ನೇಣಿಗೊಡ್ಡಿದಳು, ಅಷ್ಟಕ್ಕೂ ಏನಾಯ್ತು?

ಬುಧವಾರ, 1 ಮಾರ್ಚ್ 2017 (11:55 IST)
ಮದುವೆ ರದ್ದುಗೊಂಡಿದ್ದರಿಂದ ನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಮೃತ ನಾಗಲಕ್ಷ್ಮಿ ಎಂಬಿಎ ಪದವೀಧರೆಯಾಗಿದ್ದು ಖಾಸಗಿ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದುವರೆ ವರ್ಷದ ಹಿಂದೆ ಕಾರ್ತಿಕ್ ಎಂಬ ಸಾಫ್ಟವೇರ್ ಇಂಜಿನಿಯರ್ ಜತೆ ಆಕೆಯ ಮದುವೆ ನಿಶ್ಚಯವಾಗಿತ್ತು.ನಿಶ್ಚಿತಾರ್ಥವಾದ ಕೆಲದಿನಗಳಲ್ಲಿ ಕಾನ್ಸರ್‌ನಿಂದ ಬಳಲುತ್ತಿದ್ದ ಕಾರ್ತಿಕ್ ತಂದೆ ಸಾವನ್ನಪ್ಪಿದ್ದರು. ಹೀಗಾಗಿ ಮದುವೆಯನ್ನು ಒಂದು ವರ್ಷ ಮುಂದೂಡಲಾಗಿತ್ತು. ಇದೇ ಮೇ 29ರಂದು ಮದುವೆ ದಿನಾಂಕವನ್ನು ನಿಶ್ಚಯಿಸಿ ಕಲ್ಯಾಣ ಮಂಟಪವನ್ನು ಸಹ ಬುಕ್ ಮಾಡಲಾಗಿತ್ತು. ಲಗ್ನ ಪತ್ರಿಕೆಯನ್ನು ಕೂಡ ಹಂಚಲಾಗಿತ್ತು.  ಆದರೆ ಇತ್ತೀಚಿಗೆ ಕಾರ್ತಿಕ್ ಮದುವೆ ರದ್ದುಗೊಳಿಸೋಣ ಎಂದು ಲಾಯರ್ ನೋಟಿಸ್ ಕಳುಹಿಸಿದ್ದ. ಇದರಿಂದ ಮನನೊಂದ ರಾಜೇಶ್ವರಿ ನಿನ್ನೆ ಸಾವಿಗೆ ಶರಣಾಗಿದ್ದಾರೆ.
 
ನಿನ್ನ ಜತೆ ಮದುವೆ ನಿಶ್ಚಯವಾದ ಬಳಿಕ ನನ್ನ ತಂದೆ ಸತ್ತುಹೋದರು. ನೀನು ದುರದೃಷ್ಟವಂತೆ ಎಂದು ಕಾರ್ತಿಕ್ ಮದುವೆಯನ್ನು ರದ್ದುಗೊಳಿಸಿದರು ಎಂಬ ಆರೋಪ ಕೇಳಿ ಬಂದಿದೆ. 
 
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ. 
 

ವೆಬ್ದುನಿಯಾವನ್ನು ಓದಿ