ಇಟ್ಟುಕೊಂಡವನಿಗಾಗಿ ಕಟ್ಟಿಕೊಂಡವನನ್ನೇ ಕೊಲೆ ಮಾಡಿದ ಇಬ್ಬರು ಮಕ್ಕಳ ತಾಯಿ

ಭಾನುವಾರ, 10 ಜುಲೈ 2022 (09:30 IST)
ಮೈಸೂರು: ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಪಕ್ಕದ ಮನೆಯವನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆ ಪ್ರೇಮಿಗಾಗಿ ಗಂಡನನ್ನೇ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

36 ವರ್ಷದ ಲೋಕಮಣಿ ಎಂಬಾತ ಪತ್ನಿ ಶಿಲ್ಪಾ ಮತ್ತು ಆಕೆಯ ಪ್ರಿಯಕರನಿಂದ ಕೊಲೆಗೀಡಾಗಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತಿತ್ತು. ಇತ್ತೀಚೆಗೆ ಗಂಡನಿಗೆ ಹೆಂಡತಿಯ ಅಕ್ರಮ ಸಂಬಂಧ ಗೊತ್ತಾಗಿ ಜಗಳವಾಗಿತ್ತು. ಈ ವೇಳೆ ಕ್ಷಮೆ ಯಾಚಿಸುವ ನಾಟಕವಾಡಿದ್ದ ಶಿಲ್ಪಾ ಮತ್ತೆಂದೂ ತಪ್ಪು ಮಾಡಲ್ಲ ಎಂದಿದ್ದಳು.

ಆದರೆ ತೆರೆಮರೆಯಲ್ಲಿ ಇವರ ಅನಾಚಾರ ಮುಂದುವರಿದೇ ಇತ್ತು. ಜೊತೆಗೆ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳು. ಗಂಡ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿ ಮನೆಯವರ ಮುಂದೆ ಸಹಜ ಸಾವು ಎಂಬಂತೆ ನಾಟಕವಾಡಿದ್ದಳು. ಆದರೆ ಆಕೆಯ ವರ್ತನೆ ಗಮನಿಸಿದ ಕುಟುಂಬಸ್ಥರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಘಟನೆ ಬಯಲಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ