ನ್ಯಾಯಕ್ಕಾಗಿ ಅಧಿಕಾರಿ ಕಾಲಿಗೆ ಬಿದ್ದ ಮಹಿಳೆ!
ನ್ಯಾಯಕ್ಕಾಗಿ ಅಧಿಕಾರಿಯ ಕಾಲಿಗೆ ಮಹಿಳೆಯೊಬ್ಬರು ಬಿದ್ದ ಘಟನೆ ನಡೆದಿದೆ.
ನ್ಯಾಯಕ್ಕಾಗಿ ಆಗ್ರಹ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನೆ ನಡೆಯುತ್ತಿದ್ದ ಗ್ರಾಮಕ್ಕೆ ತಹಶಿಲ್ದಾರ್ ಭೇಟಿ ನೀಡಿದರು.
ನೆಲಮಂಗಲ ತಾಲೂಕಿನ ಮಹಿಮಾಪುರ ಗ್ರಾಮಕ್ಕೆ ತಹಶಿಲ್ದಾರ್ ರಾಜಶೇಖರ್ ಭೇಟಿ ನೀಡಿದರು. ಕೊಲೆಯಾದ ಯುವಕ ನವೀನ್ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಆಗ ಕುಟುಂಬ ವರ್ಗಕ್ಕೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಹಸೀಲ್ದಾರ್ ಕಾಲಿಗೆ ಬಿದ್ದು ಬೇಡಿಕೊಂಡ ಮೃತನ ತಾಯಿಯ ಚಿತ್ರಣ ನೋಡುಗರ ಕಣ್ಣಲ್ಲಿ ನೀರು ತರಿಸಿತು.
ನ್ಯಾಯ ಸಿಗುವವರೆಗೂ ಮಗನ ಅಂತ್ಯಸಂಸ್ಕಾರ ಮಾಡದಿರಲು ಕೆಲಕಾಲ ಪಟ್ಟು ಹಿಡಿದ ಘಟನೆಯೂ ನಡೆಯಿತು.