ಮೈಸೂರು: ಮಹಾನವಮಿ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ ಆಯುಧ ಪೂಜಾ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಚಂಡಿ ಹೋಮ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಪಂಚಲೋಹದ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತರಲಾಯಿತು. ಬಳಿಕ ರಾಜ ವಂಶಸ್ಥರು ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿ ಮೊದಲ ಪೂಜೆ ಸಲ್ಲಿಸಿದರು. ನಂತರ ಅರಮನೆಯ ಒಳಭಾಗದ ಕಲ್ಯಾಣ ಮಂಟಪದಲ್ಲಿ ಯದುವೀರ್ ಒಡೆಯರ್ ಅವರಿಂದ ಆಯುಧ ಪೂಜೆ ನಡೆಯಿತು. ನಂತರ ಅರಮನೆಯ ಒಳಾಂಗಣದಲ್ಲಿ ಪಟ್ಟದ ಆನೆಗೆ ಯದುವೀರ್ ಒಡೆಯರ್ ಪುಪ್ಪಾರ್ಚನೆ ಮಾಡಿದರು.