ಅರ್ಜುನನ ನೋಡಿ ಖುಷಿಪಟ್ಟ ಯದುವೀರ್

ಮಂಗಳವಾರ, 11 ಸೆಪ್ಟಂಬರ್ 2018 (15:37 IST)
ಮೈಸೂರು ಅರಮನೆಯಲ್ಲಿ ಗಜಪಡೆ ಜೊತೆ ಮಹಾರಾಜ ಯದುವೀರ್ ಕಾಣಿಸಿಕೊಂಡರು. ದಸರಾ ಗಜಪಡೆಯನ್ನ ನೋಡಿ ಅವುಗಳಿಗೆ ಆರೈಕೆಯನ್ನು ಯದುವೀರ್ ಒಡೆಯರ್ ಮಾಡಿದ್ದಾರೆ.

ತಾಲೀಮಿಗಾಗಿ ಮೈಸೂರು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಅರ್ಜುನ ಅಂಡ್ ಟೀಂ ನ ಆನೆಗಳನ್ನ ನೋಡಿ ಖುಷಿ ಪಟ್ಟರು.

ಅರ್ಜುನ‌ ಆನೆಗೆ ಕಬ್ಬು, ಬೆಲ್ಲ, ಬಾಳೆಹಣ್ಣು ನೀಡಿ ಆರೈಕೆ ಮಾಡಿದರು.
ಮೈಸೂರು ಅರಮನೆಯ ಕೋಡಿಸೋಮೇಶ್ವರ ದೇವಾಲಯದ ಬಳಿ ಇರುವ ಅರ್ಜುನ ಮನೆ ತೆರಳಿ ಆರೈಕೆ ಮಾಡಿದ ಯದುವೀರ್ ಒಡೆಯರ್ ಗಮನ ಸೆಳೆದರು.

ಮೈಸೂರು ಸಂಸ್ಕೃತಿಯಲ್ಲಿ ಆನೆಗಳ ಪಾತ್ರ ಬಹುಮುಖ್ಯ ಎಂದು ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಂ‌ನಲ್ಲಿ ಪೋಸ್ಟ್ ಮಾಡಿರುವ ಯದುವೀರ್ ರ ಪೋಸ್ಟ್ ವೈರಲ್ ಆಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ