ಪುಂಡಾಟ ಮೆರೆಯುತ್ತಿದ್ದ ಕಾಡಾನೆ ಏನಾಯ್ತು ಗೊತ್ತಾ?

ಮಂಗಳವಾರ, 4 ಸೆಪ್ಟಂಬರ್ 2018 (14:01 IST)
ಅರಣ್ಯ ವ್ಯಾಪ್ತಿಯಲ್ಲಿ ಪುಂಡಾಟ ಮೆರೆಯುತ್ತಿದ್ದ ಕಾಡಾನೆ ಸೆರೆಯಾಗಿದೆ.

ರಾಮನಗರ ಅರಣ್ಯ ವ್ಯಾಪ್ತಿಯಲ್ಲಿ ಪುಂಡಾಟ ಮೆರೆಯುತ್ತಿದ್ದ ಕಾಡಾನೆ ಯಶಸ್ವಿ ಸೆರೆಸಿಕ್ಕಿದೆ. ಸೆರೆ ಸಿಕ್ಕ ಪುಂಡಾನೆ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ. ಮೈಸೂರು ಜಿಲ್ಲೆ ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲಾಗಿದೆ. ಆನೆ ತಜ್ಞ ವೈದ್ಯ ಡಾ. ಮುಜೀಬ್, ಶಾರ್ಪ್ ಶೂಟರ್ ಗಳಾದ ವೆಂಕಟೇಶ, ಅಕ್ರಂ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು.

ದಸರಾ ಆನೆಗಳಾದ ಬಲರಾಮ, ಅಭಿಮನ್ಯು, ಹರ್ಷ, ದ್ರೋಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.
ಪುಂಡಾನೆ ಸೆರೆ ಕಾರ್ಯಾಚಾರಣೆಯಲ್ಲಿ ಭಾಗಿಯಾಗಿದ್ದ ಕಾರಣ ದಸರಾ ಸಾಕಾನೆಗಳಾದ ಬಲರಾಮ, ದ್ರೋಣ, ಅಭಿಮನ್ಯು ಹಾಗೂ ಹರ್ಷ ಸೆ. 2 ರಂದು ನಡೆದಿದ್ದ ಗಜಪಯಣದಲ್ಲಿ ಗೈರು ಆಗಿದ್ದರು.

ಈ ದಸರಾ ಆನೆಗಳು ಇಂದು ಮೈಸೂರು ತಲುಪಲಿವೆ. ಸೆರೆ ಸಿಕ್ಕ ಪುಂಡಾನೆಗೆ ಮತ್ತಿಗೋಡು ಆನೆ ಶಿಬಿರದಲ್ಲಿ ಟ್ರೈನಿಂಗ್ ನೀಡಲಾಗುತ್ತದೆ. ಚೆನ್ನಾಗಿ ಪಳಗಿಸಿ ಮುಂಬರುವ ದಿನಗಳಲ್ಲಿ ದಸರಾ ಮಹೋತ್ಸವಕ್ಕೆ ಎಂಟ್ರಿ ಕೊಡಿಸಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಏಕೆಂದರೆ ಸೆರೆ ಸಿಕ್ಕ ಗಂಡಾನೆ ಆಕರ್ಷಕ ಮೈಮಾಟ ಹೊಂದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ