ಯಮುನಾ ನದಿ ಭರ್ತಿ: ಎದುರಾಗಿದೆ ಅಪಾಯದ ಭೀತಿ

ಗುರುವಾರ, 27 ಸೆಪ್ಟಂಬರ್ 2018 (18:19 IST)
ಯಮುನಾ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಭೀತಿ ಎದುರಾಗಿದೆ.
ಹರಿಯಾಣದ ಅಥನಿಕುಂದ್ ಕಾಲುವೆಯಿಂದ 19 ಸಾವಿರ ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ. ಹೀಗಾಗಿ ಯಮುನಾ ನದಿ ತುಂಬಿ ಹರಿಯುತ್ತಿದ್ದು, ನದಿ ದಂಡೆಯ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾಯದ ಭೀತಿ ಎದುರಾಗಿದೆ.

ಯಮುನಾ ನದಿ ನೀರಿನ ಮಟ್ಟ 205.49 ಮೀಟರ್ ಇದೆ. ಆದರೆ ಈಗಾಗಲೇ ಅಲ್ಲಿ 204 ಮೀಟರ್ ನೀರು ಹರಿಯುತ್ತಿದೆ. ಹೀಗಾಗಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಭೀತಿ ತಲೆ ದೋರಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ದೆಹಲಿ ಸರಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮುಂಜಾಗೃತ ಕ್ರಮವಾಗಿ ತಗ್ಗು ಪ್ರದೇಶಗಳಲ್ಲಿ ದೋಣಿ ಹಾಗೂ ಚಾಲಕರನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ ಎಂದು ದೆಹಲಿ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ