ಗಂಗಾಬಿಕೆ ನೂತನ ಬಿಬಿಎಂಪಿ ಮೇಯರ್‌: ಡಿಸಿಎಂ ಪರಮೇಶ್ವರ್‌ಗೆ ಮುಖಭಂಗ?

ಗುರುವಾರ, 27 ಸೆಪ್ಟಂಬರ್ 2018 (17:34 IST)
ಕುತೂಹಲ ಕೆರಳಿಸಿದ್ದ ಬಿಬಿಎಂಪಿಗೆ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿ ಆಯ್ಕೆ ಗೊಂದಲ ಕೊನೆಗೆ ಬಗೆಹರಿದಿದೆ.
ಪಕ್ಷೇತರ ಪಾಲಿಕೆ ಸದಸ್ಯರು ಸೇರಿದಂತೆ, ರಾಮಲಿಂಗಾರೆಡ್ಡಿ ಬೆಂಬಲಿತ ಶಾಸಕರು ಗಂಗಾಂಬಿಕೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಹೀಗಾಗಿ ಬೆಂಗಳೂರಿನ ಮೇಯರ್​ ಪಟ್ಟ ಶಾಸಕ ರಾಮಲಿಂಗ ರೆಡ್ಡಿ ಬೆಂಬಲಿತ ಜಯನಗರ ಕಾರ್ಪೊರೇಟರ್​ ಗಂಗಾಬಿಕೆಗೆ ಬಹುತೇಕ ಖಚಿತ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಎರಡನೇ ಬಾರಿಯೂ ಶಾಂತಿನಗರ ವಾರ್ಡ್‌ ಕಾರ್ಪೋರೇಟರ್‌ ಸೌಮ್ಯ ಶಿವಕುಮಾರ್‌ ಅವರಿಗೆ ಮೇಯರ್ ಸ್ಥಾನ ತಪ್ಪಿದೆ.

ಇದರಿಂದ ಡಿಸಿಎಂ ಪರಮೇಶ್ವರ್​ಗೆ ಮುಖಭಂಗವಾಗಿದ್ದು, ಶಾಸಕ ರಾಮಲಿಂಗ ರೆಡ್ಡಿ ಮೇಲುಗೈ ಸಾಧಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ