ಯಡಿಯೂರಪ್ಪಗೆ ಸಿಎಂ ಆದ ಬೆನ್ನಲ್ಲೇ ಶುರುವಾಯ್ತು ಸಂಕಟ
ಬಿ.ಎಸ್.ಯಡಿಯೂರಪ್ಪ ಏಕಾಂಗಿಯಾಗಿ ಸಿಎಂಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಹೊಸ ಸಂಕಷ್ಟಗಳು ಶುರುವಾಗಿವೆ.
ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನನಗೂ ಸಚಿವ ಸ್ಥಾನ ಬೇಕು ಅಂತ ಶಾಸಕರು ಬಹಿರಂಗವಾಗಿ ಒತ್ತಾಯ ಮಾಡಲು ಶುರುಮಾಡಿದ್ದಾರೆ. ಇದು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗುತ್ತಿದೆ.
ಈ ಹಿಂದಿನ ಬಿಜೆಪಿ ಆಡಳಿತ ಅವಧಿಯಲ್ಲಿ ಸಚಿವ ಸ್ಥಾನವನ್ನು ಕೊಟ್ಟಿದ್ದಿಲ್ಲ. ಹೀಗಾಗಿ ಈ ಸಲ ನನ್ನನ್ನು ಸಚಿವನನ್ನಾಗಿ ಪಕ್ಷದ ವರಿಷ್ಠರು ಮಾಡುತ್ತಾರೆ. ಹೀಗಂತ ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಹಾಗೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಸಂತಸ ತಂದಿದೆ ಅಂದಿರೊ ಅವರು, ಸಚಿವ ಸಂಪುಟದಲ್ಲಿ ಈ ಬಾರಿ ತಮಗೆ ಅವಕಾಶ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ.