ಬೇರೆ ಪಕ್ಷಗಳಿಂದ ಬರುವವರಿಗೆ ಟಿಕೆಟ್ ಭರವಸೆ ನೀಡಲ್ಲ- ಯಡಿಯೂರಪ್ಪ
ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದ ತತ್ವ-ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಪಕ್ಷದಲ್ಲಿ ಯಾವುದೇ ಸ್ಥಾನಮಾನ ನಿರೀಕ್ಷೆ ಇಟ್ಟುಕೊಳ್ಳದೆ ಬರುವವರಿಗೆ ಮುಕ್ತ ಸ್ವಾಗತ ನೀಡಲಾಗುವುದು ಎಂದಿದ್ದಾರೆ.
ಯಾರೇ ಪಕ್ಷಕ್ಕೆ ಬಂದರೂ ಟಿಕೆಟ್ ನೀಡುವ ಭರವಸೆ ನೀಡುವುದಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲೂ ಒಂದೊಂದು ಕ್ಷೇತ್ರಕ್ಕೆ 5 ರಿಂದ 10 ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ ಮಿಷನ್-150 ತಲುಪಲು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.