ಯಡಿಯೂರಪ್ಪರ ಹೇಳಿಕೆಗೆ ಕೇಂದ್ರ ಸಚಿವರು ತಪ್ಪು ಅರ್ಥಮಾಡಿಕೊಂಡು ಖಂಡಿಸಿದ್ರಂತೆ!

ಶನಿವಾರ, 2 ಮಾರ್ಚ್ 2019 (15:18 IST)
ಯಾವುದೇ ಅಪಾರ್ಥ ಬರುವಂತೆ ಯಡಿಯೂರಪ್ಪನವರು ಮಾತನಾಡಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರ ಪುತ್ರ ಹೇಳಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ಬಿಜೆಪಿ 22ಸೀಟುಗಳನ್ನು ಗೆಲ್ಲಲಬಹುದೆಂಬ ಯಡಿಯೂರಪ್ಪ ಹೇಳಿಕೆಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮುಂಚೆಯಿಂದಲೂ ಬಿಜೆಪಿ ಪರ ವಾತಾವರಣ ಇದ್ದು, ರಾಜ್ಯದಲ್ಲಿ ಹೆಚ್ಚು ಸೀಟ್ ಗಳನ್ನು ಗೆಲ್ತೀವಿ ಅಂತ ಯಡಿಯೂರಪ್ಪ ಹೇಳ್ತಿದ್ದಾರೆ. ಸದನದಲ್ಲೂ ಅದನ್ನು ಅವರು ಹೇಳಿದ್ದಾರೆ. ಆದರೆ ಅವರ ಹೇಳಿಕೆ ತಿರುಚಿ ಅಪಾರ್ಥ ಬರುವಂತೆ ಅರ್ಥೈಸಲಾಗಿದೆ ಎಂದರು.

ಹಾಗಾಗಿ ಕೇಂದ್ರದ ಸಚಿವರೊಬ್ರು ತಪ್ಪು ಅರ್ಥ ಮಾಡ್ಕೊಂಡು ಬಿಎಸ್ ವೈ ಹೇಳಿಕೆಯನ್ನು ಖಂಡಿಸಿದ್ದಾರೆ. ಇದು ಮುಗಿದು ಹೋದ ವಿಚಾರ. ಇದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ ಎಂದರು.

ಇಂದು ನಮ್ಮ ಸೇನೆಯ ಸಾಧನೆಯನ್ಮು ಇಡೀ ವಿಶ್ವವೇ ಕೊಂಡಾಡುತ್ತಿದೆ. ಹಾಗಿರುವಾಗ ನಮ್ಮ ಸಿಎಂ ಕುಮಾರಸ್ವಾಮಿ ಮಾತ್ರ ಆಕ್ಷೇಪಿಸಿರುವುದು ಸರಿಯಲ್ಲ. ಇಲ್ಲಿನ ಮುಸ್ಲೀಮರೂ ಕೂಡ ಭಾರತೀಯರೇ ತಾನೇ?. ಯೋಧರ ಸೇವೆಯನ್ನು ಹೊಗಳಿ ವಿಜಯೋತ್ಸವ ಆಚರಿಸಿದ್ರೆ ಯಾರೂ ವಿರೋಧಿಸಲ್ಲ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ