ಸಿಎಂ ಮನೆಗೆ ಮುತ್ತಿಗೆ ಹಾಕೋದಿಲ್ಲ ಅಂತ ಯಡಿಯೂರಪ್ಪ ಹೇಳಿದ್ಯಾಕೆ?

ಶುಕ್ರವಾರ, 14 ಜೂನ್ 2019 (13:57 IST)
ಜಿಂದಾಲ್ ಗೆ ಭೂಮಿ ನೀಡಿರುವ ಮೈತ್ರಿ ಸರಕಾರದ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ ಹಾದಿ ತುಳಿದಿದೆ. ಆದರೆ ಸಿಎಂ ಮನೆಗೆ ಮುತ್ತಿಗೆ ಹಾಕೋದಿಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ತುಘಲಕ್ ದರ್ಬಾರ್, ಲೂಟಿಯ ಬಗ್ಗೆ ನಮ್ಮ ಬಿಜೆಪಿ ಸಂಸದರು ಲೋಕಸಭೆಯಲ್ಲೂ ಪ್ರಸ್ತಾಪಿಸಬೇಕು. ಜಿಲ್ಲಾ, ತಾಲೂಕು ಮಟ್ಟದಲ್ಲೂ ನಾವು ಹೋರಾಟ ರೂಪಿಸುತ್ತೇವೆ. ನಮ್ಮ ಸಂಸದರು ದೆಹಲಿಗೆ ಹೋಗಬೇಕಾಗಿರುವ ಕಾರಣ ಭಾನುವಾರದ ಸಿಎಂ ಮನೆ ಮುತ್ತಿಗೆ ಕಾರ್ಯಕ್ರಮ ಕೈಬಿಟ್ಟಿದ್ದೇವೆ ಅಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದ ಈ ಸರ್ಕಾರ ಮನೆಗೆ ಹೋಗುವವರೆಗೆ ನಾವು ಸುಮ್ಮನಿರಲ್ಲ. ಜಿಂದಾಲ್ ಭೂಮಿ ‌ಮಾರಾಟ ವ್ಯವಹಾರದಲ್ಲಿ ಸರ್ಕಾರದ ಪ್ರಮುಖರಿಗೆ ಸಾಕಷ್ಟು ಕಿಕ್ ಬ್ಯಾಕ್ ಬಂದಿರೋ ಅನುಮಾನವಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಎಂದರು.

ಒಂದು ವರ್ಷದಿಂದ ಬಡಕೊಂಡೆ. ಫೈವ್ ಸ್ಟಾರ್ ಹೊಟೇಲ್ ವಾಸ್ತವ್ಯ ಮಾಡಿದ್ರೆ ಆಗಲ್ಲ. ಜನ‌ಸಾಮಾನ್ಯರು ಸಿಎಂ ಭೇಟಿ ಮಾಡಲು ಆಗಲ್ಲ. ಯಾರೋ ಕಮಿಷನ್ ಕೊಡುವವರು ಭೇಟಿಯಾಗಬಹುದು. ಈಗ ಸರ್ಕಾರದ ಬುಡ ಅಲುಗುತ್ತಿದೆ ಎಂದು ಗೊತ್ತಾದ ಮೇಲೆ ಸರ್ಕಾರಿ ಬಂಗಲೆಗೆ ವಾಸ್ತವ್ಯ ಬದಲಾಯಿಸುತ್ತೇನೆ ಎಂದು ಸಿಎಂ ಎನ್ನುತ್ತಿದ್ದಾರೆ ಎಂದು ಯಡಿಯೂರಪ್ಪ ಟಾಂಗ್ ನೀಡಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ