ಗೋಮಾಂಸ ತಿಂದಿದ್ದೇನೆ.. ಕೇಳೋಕೆ ನೀವ್ಯಾರು ಎಂದ ಸಚಿವ ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ನಾನು ದನದ ಮಾಂಸ ತಿಂದಿದ್ದೇನೆ. ಅದನ್ನು ಕೇಳಲು ನೀವ್ಯಾರು ಎಂದು ಗೋರಕ್ಷಕರಿಗೆ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನೆ ಮಾಡಿದ್ದಾರೆ.
ನಾನು ದನದ ಮಾಂಸ ತಿಂದಿದ್ದೇನೆ. ಅದರ ರುಚಿ ಹಂದಿ ಮಾಂಸ, ಕುರಿ ಮಾಂಸದ ತರಹವೇ ಇದೆ. ಇದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆದರೆ ಬಿಜೆಪಿ ಪಕ್ಷದವರು ಹಸುವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಗೋ ರಕ್ಷಕರ ಹೆಸರಿನಲ್ಲಿ ಗಲಭೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.