You are not Dad, You're Just Mad: ಪ್ರದೀಪ್‌ ಈಶ್ವರ್‌ಗೆ ಬಿಜೆಪಿ ಕೌಂಟರ್‌

Sampriya

ಗುರುವಾರ, 20 ಮಾರ್ಚ್ 2025 (16:36 IST)
Photo Courtesy X
ಬೆಂಗಳೂರು: ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಅಂಗವಾಗಿ ನಡೆದ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಬೆಂಗಳೂರು ಸೆಂಟ್ರಲ್ ಲೋಕಸಭಾ ಸದಸ್ಯ ಪಿಸಿ ಮೋಹನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಇದೀಗ ಬಿಜೆಪಿ ಹಾಗೂ ಪ್ರದೀಪ್‌ ಈಶ್ವರ್ ಮಧ್ಯೆ ಕೌಂಟರ್‌ಗಳು ಮುಂದುವರೆದಿದೆ.

ಆ್ಯಕ್ಸಿಡೆಂಟಲ್‌ ಎಂಎಲ್‌ಎ ಎಂದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಪ್ರದೀಪ್ ಈಶ್ವರ್‌ ಅವರು, ಕರ್ನಾಟಕದ ಬಿಜೆಪಿಯವರು ನನ್ನನ್ನು ಆಕ್ಸಿಡೆಂಟಲ್ ಎಂಎಲ್‌ಎ ಎಂದು ಕರೆದಿದ್ದಾರೆ. ಮುಂದಿನ ಮಂಗಳವಾರ ಬೆಳಗ್ಗೆ 10 ಗಂಟೆಗೆ ಅವರಿಗೆ ಆಕ್ಸಿಡೆಂಟಲ್ ಎಂಎಲ್‌ಎಯ ರಿಪೋರ್ಟ್ ಕಾರ್ಡ್‌ ಅನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.  

ಇದಕ್ಕೆ ಕೌಂಟರ್ ನೀಡಿದ ಬಿಜೆಪಿ, ಆ‍್ಯಕ್ಸಿಡೆಂಟಲ್‌ ಎಂಎಲ್ಎ ಪ್ರದೀಪ್‌ ಈಶ್ವರ್‌ ಅವರೆ,
You are not Dad, You're Just Mad!!

ನಿಮ್ಮ ದೈನೇಸಿ ರಿಪೋರ್ಟ್‌ ಕಾರ್ಡ್‌ನಲ್ಲಿ ಮೊನ್ನೆ ತಾನೇ ಚಿಕ್ಕಬಳ್ಳಾಪುರ ಮತಕ್ಷೇತ್ರ ವ್ಯಾಪ್ತಿಯ ಹೆಚ್. ಕುರುಬರಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಸಿದ್ದಪ್ಪ ಅವರ ಅರ್ಜಿ ಇರುತ್ತದೆಯೇ..??

ನಿಮ್ಮ ಬೊಗಳೇಶಿ ರಿಪೋರ್ಟ್‌ ಕಾರ್ಡ್‌ನಲ್ಲಿ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಅನುಭವಿಸಿದ ಸಂಕಷ್ಟಗಳು ಇರುತ್ತವೆಯೇ..??

ಮಂಗಳವಾರವಲ್ಲ ಬೇಕಿದ್ದರೆ ಇನ್ನಾರು ತಿಂಗಳು ಸಮಯ ತೆಗೆದುಕೊಳ್ಳಿ!!

ರಿಪೋರ್ಟ್‌ ಕಾರ್ಡ್‌ ನೀಡಬೇಕು ಎಂಬ ಧಾವಂತದಲ್ಲಿ ನೀವು ತೆಲುಗು ಸಿನಿಮಾಗಳಿಗೆ ಬರೆದ ಡೈಲಾಗುಗಳೆಲ್ಲವನ್ನು ಆ ಬೋಗಸ್‌ ರಿಪೋರ್ಟ್‌ ಕಾರ್ಡ್‌ಗೆ ಸೇರಿಸಬೇಡಿ ಆಯ್ತಾ ಎಂದು ಬಿಜೆಪಿ ತಿರುಗೇಟು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ