ಭೀಮಾ ತೀರದಲ್ಲಿ ಹಳೇ ದ್ವೇಷಕ್ಕೆ ಯುವಕನ ರುಂಡ ಕಟ್

ಸೋಮವಾರ, 31 ಆಗಸ್ಟ್ 2020 (10:23 IST)
ಹಳೇ ದ್ವೇಷದ ಹಿನ್ನೆಲೆಯಲ್ಲಿ ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ.

ಎಂಟ್ಹತ್ತು ವರ್ಷಗಳ ಹಿಂದೆ ನಡೆದ ಕೊಲೆಗೆ ಪ್ರತೀಕಾರವಾಗಿ ಯುವಕನೊಬ್ಬನ ರುಂಡ ಕತ್ತರಿಸಲಾಗಿದೆ ಎನ್ನಲಾಗಿದೆ.

ಕಲಬುರಗಿ ಜಿಲ್ಲೆಯ ಸಂಗಾಪುರದಲ್ಲಿ ಬಾಬು ಮಲ್ಲೇಶಪ್ಪ ಕೋಬಾಳ ಎಂಬ ಯುವಕನ ಕೊಲೆ ನಡೆದಿದೆ.

ಬೈಕ್ ಮೇಲಿದ್ದ ಬಾಬು ಮೇಲೆ ದಾಳಿ ನಡೆಸಿ ಪ್ರಭು ಕಾಂಬಳೆ ಎಂಬಾತ ಕೊಡಲಿಯಿಂದ ಕಡಿದು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ.

ದೇವಲಗಾಣಗಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕೊಲೆಗಾರನ ಬಂಧನಕ್ಕೆ ಪೊಲೀಸರು ತನಿಖೆ ಶುರುಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ