ನಿಮ್ಮ ಹಣ ಮಾಯವಾಗಬಹುದು : ATM ಬಳಸುವಾಗ ಹುಷಾರ್

ಶುಕ್ರವಾರ, 1 ಮೇ 2020 (17:18 IST)
ಎಟಿಎಂ ಬಳಸುವಾಗ ಕೆಲವರು ಅಪರಿಚಿತರ ಸಹಾಯ ಪಡೆದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.  ನಿಮ್ಮ ಹಣ ಭದ್ರವಾಗಿರಬೇಕಾದರೆ ಈ ಟಿಪ್ಸ್ ಪಾಲಿಸಿ.

ಮೊದಲು ATM ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಬಳಸಿರಿ. ಇಲ್ಲವಾದರೆ ನಿಮ್ಮ ಮಕ್ಕಳು, ಸಂಬಂಧಿಕರೊಂದಿಗೆ ಹೋಗಿ ಹಣ ಡ್ರಾ ಮಾಡಿಕೊಳ್ಳಿ.

ಹಣ ಡ್ರಾ ಮಾಡುವಾಗ ಅಪರಿಚಿತರ ಸಹಾಯ ಪಡೆಯಬೇಡಿ.

ಮಾರ್ಗಗಳ ನಡುವೆ ಒಂದೊಂದೆ ಇರುವ ATM ನಲ್ಲಿ ಹಣವನ್ನು ಡ್ರಾ ಮಾಡಲು ಬಳಸಬೇಡಿ. ಆದಷ್ಟು ಬ್ಯಾಂಕ್ ಒಳಗಡೆ ಇರುವ ATM ಬಳಸಿರಿ.

ATM card, Debit card, Credit card ಹೊಂದಿದ ಖಾತೆಯಲ್ಲಿ ಕೇವಲ 5 ರಿಂದ 10 ಸಾವಿರ ಮಾತ್ರ ಇಟ್ಟುಕೊಳ್ಳಿ.

ಇನ್ನೊಂದು ಖಾತೆಯಲ್ಲಿ ಹೆಚ್ಚು ಹಣ ಇಟ್ಟುಕೊಂಡು ಅದಕ್ಕೆ ಯಾವುದೇ ATM card, Credit card, Debit card ಗಳ ಲಿಂಕ್ ಮಾಡಿಕೊಳ್ಳಬೇಡಿ.

ಯಾರು ಅಪರಿಚಿತರ ಕೈಯಲ್ಲಿ ATM ಕಾರ್ಡ, ಪಾಸ್ ವರ್ಡ್ ಕೊಟ್ಟು ಮೋಸದ ಬಲೆಗೆ ಒಳಗಾಗಬಾರದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ