ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾಂಸ ಖರೀದಿ ಜೋರು..!!

ಭಾನುವಾರ, 3 ಏಪ್ರಿಲ್ 2022 (17:15 IST)
ನಗರದಲ್ಲಿ ಯುಗಾದಿ ಹೊಸ ತೊಡಕು ಮಾಂಸ ಖರೀದಿ ಭರಾಟೆ ಜೋರಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಮಟನ್ ಶಾಪ್​​ಗಳ ಮುಂದೆ ಜನರು ಖರೀದಿಗೆ ಮುಗಿಬಿದ್ದರು.
ಬೆಳಗ್ಗಿನಿಂದಲೇ ಬೆಂಗಳೂರು ಹೊರವಲಯದ ಹಲವೆಡೆ ಮಟನ್ ಖರೀದಿಸಲು ಜನ ಸೇರಿದ್ದರು. ಕೆ.ಆರ್.ಪುರ, ಆವಲಹಳ್ಳಿ, ಮೇಡ ಹಳ್ಳಿ, ಹೊಸಕೋಟೆ ಸೇರಿದಂತೆ ಹಲವೆಡೆ ಮಟನ್ ಶಾಪ್​ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತ್ತೆ ಕೆಲವು ಕಡೆ ಗುಂಪು ಗುಂಪಾಗಿ ಮಟನ್-ಚಿಕನ್ ಖರೀದಿಸಲು ನಿಂತಿದ್ದಾರೆ.
 
ಪ್ರತಿ ವರ್ಷ ಮಧ್ಯರಾತ್ರಿಯಿಂದಲೇ ವ್ಯಾಪಾರ ಆರಂಭಿಸುವ ಆವಲಹಳ್ಳಿ ಮಟನ್​ ಶಾಪ್​ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು. ಇಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಮಾಂಸ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಉಳಿದಂತೆ ಎಲ್ಲಾ ಮಟನ್, ಚಿಕನ್, ಪೊರ್ಕ್, ಫಿಶ್ ಶಾಪ್‌ಗಳು ಬೆಳಗ್ಗೆ 4 ಗಂಟೆಯಿಂದ ವ್ಯಾಪಾರ ಶುರು ಮಾಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ