ಜಮೀರ್ ಅಹ್ಮದ್ ಮುಸ್ಲಿಂ ಏರಿಯಾಗೆ ಮಾತ್ರ ಎಲ್ಲಾ ಮಾಡಿಕೊಡ್ತಾರೆ: ಸ್ಥಳೀಯರ ಆಕ್ರೋಶ

Krishnaveni K

ಗುರುವಾರ, 13 ಮಾರ್ಚ್ 2025 (11:20 IST)
ಚಾಮರಾಜಪೇಟೆ: ಬೆಂಗಳೂರಿನಲ್ಲಿ ನೀರು ಹಿಡಿಯುವಾಗ ವಿದ್ಯುತ್ ತಗುಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮುಸ್ಲಿಂ ಏರಿಯಾಗೆ ಮಾತ್ರ ಇಲ್ಲಿನ ಶಾಸಕ ಜಮೀರ್ ಅಹ್ಮದ್ ಮಾಡಿಕೊಡ್ತಾರೆ. ನಮಗೆ ಏನೂ ಮಾಡಲ್ಲ ಎಂದಿದ್ದಾರೆ.

ಇಂದು ಬೆಳಿಗ್ಗೆ 6.30 ಕ್ಕೆ ಘಟನೆ ನಡೆದಿದೆ. ನೀರು ಹಾಕಲು ಮೋಟಾರ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾಳೆ. ಇದೀಗ ಮಕ್ಕಳು ಅನಾಥವಾಗಿದೆ. ಇದು ಸಚಿವ ಜಮೀರ್ ಅಹ್ಮದ್ ಪ್ರತಿನಿಧಿಸುವ ಕ್ಷೇತ್ರವಾಗಿದೆ.

ನಮಗೆ ಇಲ್ಲಿ ಮನೆ ಮನೆಗೆ ನೀರಿನ ವ್ಯವಸ್ಥೆಯಿಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ. ಪ್ರತೀ ಬಾರಿ ಚುನಾವಣೆ ಬಂದಾಗ ನೀರು ಹಾಕಿಸಿಕೊಡ್ತೀವಿ. ಈಗ ವೋಟ್ ಹಾಕಿ ಎಂದು ರಾಜಕಾರಣಿಗಳು ಹೇಳ್ತಾರೆ. ಆದರೆ ವೋಟ್ ಆದ ಮೇಲೆ ಯಾರೂ ಏನೂ ಮಾಡಲ್ಲ. ಇಲ್ಲೇ ಪಕ್ಕದಲ್ಲಿ ಮುಸ್ಲಿಮರ ಏರಿಯಾ ಇದೆ. ಅಲ್ಲಿ ಎಲ್ಲಾ ಮನೆಗೂ ನೀರಿದೆ. ನಮ್ಮದು ಸ್ಲಂ ಏರಿಯಾ, ಅದಕ್ಕೇ ನಮ್ಮ ಕಡೆ ತಿರುಗಿಯೂ ನೋಡಲ್ಲ ಎಂದು ಮಹಿಳೆಯೊಬ್ಬರು ಖಾಸಗಿ ವಾಹಿನಿ ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ