ಕುಮಾರಸ್ವಾಮಿಗೆ ಕರಿಯಾ ಎಂದಿದ್ದಕ್ಕೆ ಕೊನೆಗೂ ತಪ್ಪಾಯ್ತು ಕ್ಷಮಿಸಿ ಎಂದ ಜಮೀರ್ ಅಹ್ಮದ್

Sampriya

ಮಂಗಳವಾರ, 12 ನವೆಂಬರ್ 2024 (15:05 IST)
ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ, ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ತಮ್ಮ ಹೇಳಿಕೆ ಬಹಳಷ್ಟು ವಿವಾದ ಸೃಷ್ಟಿಯಾಗ್ತಿದ್ದಂತೆ ಕ್ಷಮೆ ಕೋರಿದರು.

ಜಮೀರ್ ಅಹ್ಮದ್ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ಮಾಡುತ್ತಾ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್'' ಎಂದು ಹೇಳಿದ್ದರು. ಜಮೀರ್ ಮಾತಿನ ವೀಡಿಯೋ ವೈರಲ್ ಆಗುತ್ತಿದ್ದಂತೆ ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ನಾನು ಮತ್ತು ಕುಮಾರಸ್ವಾಮಿ ಅವರು ಆತ್ಮೀಯರಾಗಿದ್ದವರು. ದಿನದ 24 ಗಂಟೆಯಲ್ಲಿ ನಾವಿಬ್ಬರು 14 ಗಂಟೆ ಜತೆಯಾಗಿ ಇರ್ತಿದ್ವಿ. ಅವರು ನನ್ನನ್ನು ಪ್ರೀತಿಯಿಂದ ಕುಳ್ಳ ಅಂತಿದ್ರು, ನಾನು ಕರಿಯ ಅಂತಾ ಕರೆಯುತ್ತಿದ್ದೆ. ಇದೀಗ ಚುನಾವಣೆ ಹಿನ್ನೆಲೆ ಇದು ದೊಡ್ಡ ವಿಚಾರಾ ಆಗ್ತೀದೆ. ನಾನು ಮೊದಲ ಬಾರಿಗೆ ಕರಿಯಣ್ಣ ಅಂತಿಲ್ಲ. ನಾನು ಅಂತಹದ್ದು ಏನು ಹೇಳಿಲ್ಲ. ಪ್ರೀತಿಯಿಂದ ಅವರು ಕುಳ್ಳ ಅಂತಾ ಇದ್ರು, ನಾನು ಕರಿಯಣ್ಣ ಅಂತಾ ಇದ್ದೆ. ನನ್ನ ಮಾತಿಂದ ಯಾರಿಗಾದ್ರು ನಾವಾಗಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನ ಹೇಳಿಕೆಯಿಂದ ಉಪಚುನಾವಣೆ ಮೇಲೆ ಪರಿಮಾಣ ಬೀರಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ