ಮುಂಬರುವ ಕ್ರಿಸ್ಮಸ್, ಹೊಸವರ್ಷ, ಸಂಕ್ರಾಂತಿ ಹಬ್ಬಕ್ಕಾಗಿ ಗ್ರಾಹಕರಿಗೆ ಸಿಹಿ ಪದಾರ್ಥಗಳನ್ನು ರಿಯಾಯತಿ ದರದಲ್ಲಿ ನೀಡಿ ತಿಂಡಿ ಪ್ರಿಯರಿಗೆ ಮತ್ತಷ್ಟು ಖುಷಿಕೊಡಬೇಕು ಅಂತ ಕೆಎಂಎಫ್ ಚಿಂತನೆ ಮಾಡಿ ಈ ಹಿನ್ನೆಲೆ ಇಂದು ನಂದಿನಿ ಸಿಹಿ ಉತ್ಸವ ಯೋಜನೆ ಗೆ ಚಾಲನೆ ನೀಡಲಾಯಿತು. ಚಾಮರಾಜಪೇಟೆಯಲ್ಲಿರುವ ನಂದಿನಿ ಪಾರ್ಲರ್ನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದ್ರು.ಇಂದಿನಿಂದ ಒಂದು ತಿಂಗಳ ವರೆಗೆ ಎಲ್ಲಾ ನಂದಿನಿ ಸಿಹಿ ಉತ್ಪನ್ನ ಗಳಾದ ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡ,ಕೇಸರ್ ಪೇಡ, ಏಲಕ್ಕಿ ಪೇಡ, ಸಿರಿಧಾನ್ಯ ಲಡ್ಡು, ಹಾಲಿನ ಪುಡಿ, ಜಾಮೂನ್ ರಸಗುಲ್ಲಾ ಸೇರಿದಂತೆ ಎಲ್ಲಾ ಬಗೆಯ ಉತ್ಪನ್ನ ಗಳ ಮೇಲೆ ೨೦% ರಿಯಾಯಿತಿ ದರದಲ್ಲಿ ಇದೇ ಪ್ರಥಮ ಬಾರಿಗೆ ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ.ಈ ಬಾರಿಯ ಗ್ರಾಹಕರ ಅಭಿರುಚಿಯನ್ನ ಪರಿಗಣಿಸಿ ಹೊಸದಾಗಿ ಖೋವಾ, ಬಾದಾಮ್ ರೋಲ್,ಖೋವಾ ಚಾಕೋನಟ್ಟಿ ರೋಲ್, ಗೋಡಂಬಿ ರೋಲ್, ಕಲಾಕಂದ್, ಲಾಡು ಸೇರಿ ಅನೇಕ ಉತ್ಪನ್ನಗಳನ್ನ ಸೇರ್ಪಡೆ ಮಾಡಲಾಗಿದೆ.ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಬಿಸಿ ಸತೀಶ್ ಸಾಂಕೇತಿಕ ವಾಗಿ ಚಾಲನೆ ನೀಡಿದ ನಂತರ ಮಾತನಾಡಿ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ರುಚಿಕರ ತಿಂಡಿಗಳನ್ನ ನೀಡಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದರು.