ಮಲ್ಲೇಶ್ವರಂ 8 ನೇ ಮುಖ್ಯರಸ್ತೆಯಲ್ಲಿ ಅಗ್ನಿ ಅವಘಡ

ಮಂಗಳವಾರ, 19 ಡಿಸೆಂಬರ್ 2023 (15:00 IST)
ಮಲ್ಲೇಶ್ವರಂ 8 ನೇ ಮುಖ್ಯರಸ್ತೆಯ ಸಂಪಿಗೆ ರಸ್ತೆ ಸಿಗ್ನಲ್‌ ಬಳಿಯ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಂಗಡಿಯಲ್ಲಿದ್ದ ಬಟ್ಟೆ ಸುಟ್ಟು ಕರಕಲಾಗಿದೆ.ಬೆಂಕಿ ಅಗ್ನಿಶಾಮಕ‌ ಸಿಬ್ಬಂದಿ ಸಂಪೂರ್ಣವಾಗಿ ನಂದಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಇಲ್ಲ.ಅಂಗಡಿ ಕ್ಲೋಸ್ ಮಾಡಿ‌ ಮಾಲೀಕರು ತೆರಳಿದ್ದರು.ಕಂಪ್ಯೂಟರ್ ಆನ್ ಮಾಡಿ ಹಾಗೆ ಹೋಗಿದ್ದಾರೆ.ಕಂಪ್ಯೂಟರ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ.ನಂತರ ಇಡೀ ಅಂಗಡಿಗೆ ಬೆಂಕಿ ವ್ಯಾಪಿಸಿದೆ.ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ