ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದ್ದು,ರಾಜ್ಯದ ಬೊಕ್ಕಸಕ್ಕೇ ಪಾನಪ್ರಿಯರು ಕಿಕ್ ಕೊಟ್ಟಿದ್ದಾರೆ.ಡಿ.30ರಂದು 43.41 ಕೋಟಿ ರು. ಮೊತ್ತದ 1.95 ಲಕ್ಷ ಕೇಸ್ ಬಿಯರ್ ಮಾರಾಟವಾಗಿದ್ದರೆ, 179.72 ಕೋಟಿ ರು. ಮೌಲ್ಯದ IML ಬ್ರಾಂಡಿ, ವಿಸ್ಕಿ, ರಮ್ ಮತ್ತಿತರ 3.08 ಲಕ್ಷ ಕೇಸ್ ಮದ್ಯ ಬಿಕರಿಯಾಗಿದೆ. ಒಟ್ಟು 2 ದಿನದಲ್ಲಿ 416.67 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.
ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು. ಆದರೆ, ನಾವಂತೂ ಹೆಚ್ಚಿಸಿಲ್ಲ. ಅಬಕಾರಿ ಶುಲ್ಕ ಹೆಚ್ಚಳ ಮಾಡೋದಾದರೆ ಮೊದಲೇ ಹೇಳುತ್ತೇವೆ. ಇನ್ನು ಬಜೆಟ್ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾವುದೇ ಟಾರ್ಗೆಟ್ ಕೂಡ ನೀಡಿಲ್ಲ, ಆದರೆ, ಆದಾಯ ಸಂಗ್ರಹದ ಗುರಿ ಇದೆ ಎನ್ನುವ ಮೂಲಕ ಎಲ್ಲ ಊಹಾಪೋಹಗಳಿಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರಸ್ಪಷ್ಟನೆ ತೆರೆಎಳೆದಿದ್ದಾರೆ.