ತೆರೆಯ ಮೇಲೆ ಕಾಣುವ ಸ್ಟಾರ್ ಗಳು ರಾಜಕೀಯಕ್ಕೆ ಬಂದ್ರೆ ಕ್ರಾಂತಿಯಾಗುತ್ತೋ ಇಲ್ವೋ ಎಂಬುದರ ಕುರಿತು ನಟ ಹಾಗೂ ನಿರ್ದೇಶಕರೊಬ್ಬರು ಚರ್ಚೆ ಹುಟ್ಟುಹಾಕಿದ್ದಾರೆ.
ಫಿಲ್ಮ್ ಸ್ಟಾರ್ ಬಂದ ತಕ್ಷಣ ಕಾಂತ್ರಿಯಾಗಲ್ಲಾ ಅದು ನಮ್ಮ ಮೂರ್ಖತನ. ನಮ್ಮನ್ನು ಸಿನೆಮಾದಲ್ಲಿ ನೋಡುತ್ತಾರೆ. ಆದ್ರೆ ಓಟ್ ಹಾಕಲ್ಲಾ ಎಂದು ಬೀದರ್ ನಲ್ಲಿ ನಟ ಉಪೇಂದ್ರ ಪರೋಕ್ಷವಾಗಿ ಮಂಡ್ಯದ ಸ್ಟಾರ್ ಪ್ರಚಾರಕ್ಕೆ ಟಾಂಗ್ ನೀಡಿದ್ದಾರೆ. ಬೀದರ್ ನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ಉತ್ತಮ ಪ್ರಜಾಕೀಯ ಅಭ್ಯರ್ಥಿ ಅಂಬರೀಶ್ ಕೆಂಚಾ ಪರ ಮತಯಾಚನೆ ಮಾಡಿದರು. ಉಪ್ಪಿಗೆ ನೀವು ರಾಜಕೀಯಕ್ಕೆ ಬಂದ್ರೆ ಬದಲಾಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪರೋಕ್ಷವಾಗಿ ಉತ್ತರ ನೀಡಿದ ಉಪ್ಪಿ, ಚುನಾವಣೆಯಲ್ಲಿ ಸ್ಟಾರ್ ಗಳು ಕ್ಯಾಂಪೇನ್ ಮಾಡಿದ್ರೆ ಜನ ಓಟ್ ಹಾಕಲ್ಲಾ ಅಂಥಾ ಹೇಳಿಕೆ ನೀಡಿ ಆಶ್ಚರ್ಯ ಮೂಡಿಸಿದ್ರು.
ಅಭ್ಯರ್ಥಿಗಳ ಪರ ರೊಡ್ ಶೋ ಮಾಡುತ್ತಿರುವ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಪ್ಪಿ, ನಾವು ಇನ್ನು ಯಾವ ಕಾಲದಲ್ಲಿ ಇದ್ದೇವೆ? ರೋಡ್ ಶೋ, ಸಭೆ ಮಾಡುವ ಮೂಲಕ ಜನರಿಗೆ ತೊಂದರೆ ಕೊಡಬೇಕಾ ಎಂದ್ರು? ಪ್ರಣಾಳಿಕೆ ಎನ್ನುವುದು ಬರೀ ಭರವಸೆಯಾಗಬಾರದು.
ಜನರೇ ನಮ್ಮ ಪ್ರಣಾಳಿಕೆ. ಜನರೆ ನಮಗೆ ಏನು ಬೇಕು ಎಂದು ಹೇಳುತ್ತಾರೆ ಎಂದು ನಟ ಉಪೇಂದ್ರ ಬೀದರ್ ನಲ್ಲಿ ಹೇಳಿಕೆ ನೀಡಿದರು.