ಸಿ.ಟಿ.ರವಿಗೆ ಘೇರಾವ್, ತರಾಟೆ

ಬುಧವಾರ, 17 ಏಪ್ರಿಲ್ 2019 (15:43 IST)
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಶಾಸಕ ಸಿ. ಟಿ. ರವಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ದೇವನೂರಿನಲ್ಲಿ ಘಟನೆ ನಡೆದಿದೆ.

ಕುಡಿಯುವ ನೀರು, ರಸ್ತೆ ಮೂಲಭೂತ ಸೌಲಭ್ಯ ನೀಡುವಂತೆ ಸಿ. ಟಿ. ರವಿ ಗೆ ಗ್ರಾಮಸ್ಥರಿಂದ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಉಡುಪಿ_ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಪರ ಪ್ರಚಾರದ ವೇಳೆ ಘಟನೆ ನಡೆದಿದೆ.
ಗ್ರಾಮಸ್ಥರು ತರಾಟೆ ತಗೆದುಕೊಳ್ಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಸಿ. ಟಿ. ರವಿ.

ದೇವನೂರು ಸಿ. ಟಿ. ರವಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿದೆ. ತನ್ನ ಕ್ಷೇತ್ರದ ಜನರಿಂದಲೇ ರವಿ ತರಾಟೆಗೆ ಒಳಗಾಗಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ