ಹಾವೇರಿ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Haveri loksabha election 2019 Live updates

[$--lok#2019#state#karnataka--$]

ಶರಣರ ನಾಡು ಖ್ಯಾತಿಯ ಹಾವೇರಿಯಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೆಗಾಫೈಟ್ ಇದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಗುರಿಹೊಂದಿದ್ದಾರೆ.

ಇನ್ನು ಕಾಂಗ್ರೆಸ್ ನಿಂದ ಡಿ.ಆರ್.ಪಾಟೀಲ್ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕೈಪಾಳೆಯದಿಂದ ಅಖಾಡಕ್ಕೆ ಧುಮುಕಿದ್ದು, ಸಂಸತ್ ಪ್ರವೇಶಿಸುವ ಹುಮ್ಮಸ್ಸಿನಲ್ಲಿದ್ದಾರೆ. 
 
2014ರಲ್ಲಿ ಕಾಂಗ್ರೆಸ್ ನ ಸಲೀಂ ಅಹ್ಮದ್ ಅವರನ್ನು 87 ಸಾವಿರ ಮತಗಳ ಅಂತರದಿಂದ ಬಿಜೆಪಿಯ ಶಿವಕುಮಾರ ಉದಾಸಿ ಪರಾಭವಗೊಳಿಸಿದ್ದರು.
 
ಬಿಜೆಪಿಯಲ್ಲಿ ಪಕ್ಷದ ಮುಖಂಡರ ಒಳಗುದ್ದು ಗೆಲುವಿಗೆ ಮಾರಕವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸತತ ನಾಲ್ಕು ಬಾರಿ ಗದಗ ಶಾಸಕರಾಗಿದ್ದರು ಡಿ.ಆರ್.ಪಾಟೀಲ್ ಅವರ ಸರಳತನ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಾಗಬೇಕಿದೆ.
 
ಬಿಜೆಪಿ ಭದ್ರಕೋಟೆಯಲ್ಲಿ ಕೈ ಪಡೆ ತೀವ್ರ ಕಸರತ್ತು ನಡೆಸುತ್ತಿದೆ. 
[$--lok#2019#constituency#karnataka--$]
ಒಟ್ಟು 17,02,618 ರಲ್ಲಿ 8,69,230 ಪುರುಷರು, 8,33,317 ಮಹಿಳೆಯರು ಹಾಗೂ 71 ಇತರೆ ಮತದಾರರು ಇಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ