ಕಲಬುರಗಿ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Kalaburagi loksabha election 2019 Live updates

[$--lok#2019#state#karnataka--$]

ಬಿಸಿಲೂರಿನಲ್ಲಿ 2019ರಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಖರ್ಗೆ – ಮೋದಿ ನಡುವಿನ ಹಣಾಹಣಿ ಎಂದೇ ಬಿಂಬಿತವಾಗಿದೆ. ಕಾಂಗ್ರೆಸ್ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯಿಂದ ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ ನಡುವಿನ ಹೋರಾಟ ಇಲ್ಲಿದೆ. 
 
2014ರಲ್ಲಿ ಆಗ ಬಿಜೆಪಿಯಲ್ಲಿದ್ದ ಮಾಜಿ ಸಚಿವ ರೇವೂ ನಾಯಕ ಬೆಳಮಗಿಯವರನ್ನು 75 ಸಾವಿರ ಮತಗಳ ಅಂತರದಿಂದ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದರು. 
 
ಈಗಾಗಲೇ ಪ್ರಮುಖವಾಗಿ 11 ಎಲೆಕ್ಷನ್ ಗಳನ್ನು ಜಯಿಸಿರುವ ಖರ್ಗೆ ವಿರುದ್ಧ ಬಿಜೆಪಿಯಿಂದ ಹಾಲಿ, ಮಾಜಿ ಶಾಸಕರು, ಸಚಿವರು ಒಂದಾಗಿ ಉಮೇಶ ಜಾಧವ ಪರ ಕೆಲಸ ಮಾಡಿದ್ದಾರೆ. ಎರಡು ಬಾರಿ ಲೋಕಸಭೆ ಪ್ರವೇಶ ಮಾಡಿರುವ ಖರ್ಗೆ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. 
 
ಕಲಬುರಗಿ ಕಾಂಗ್ರೆಸ್ ನ ಭದ್ರಕೋಟೆ. ಇಲ್ಲಿ ಪ್ರತಿಬಾರಿ ಚುನಾವಣೆ ನಡೆದಾಗಲೂ ಕೈ ಪಡೆಯಿಂದ ಶಾಸಕರು ಹೆಚ್ಚಾಗಿ ಚುನಾಯಿತರಾಗುತ್ತಿದ್ದಾರೆ. 
[$--lok#2019#constituency#karnataka--$]
ಒಟ್ಟು 19,21,042 ಮತದಾರರಲ್ಲಿ 9,68,328 ಪುರುಷರು, 9,52,714 ಮಹಿಳಾ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ