ವಿಜಯಪುರ ಲೋಕಸಭೆ ಚುನಾವಣೆ 2019ನೇರ ಪ್ರಸಾರ | Vijayapura loksabha election 2019Live updates

[$--lok#2019#state#karnataka--$]

ಗುಮ್ಮಟ ನಗರಿ ಖ್ಯಾತಿಯ ವಿಜಯಪುರದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ನಡುವೆ
ಜಟಾಪಟಿ ಏರ್ಪಟ್ಟಿದೆ. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಬಿಜೆಪಿಯಿಂದ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ, ಮೈತ್ರಿಪಡೆಯಿಂದ ಸುನೀತಾ ದೇವಾನಂದ ಚವ್ಹಾಣ ಕಣದಲ್ಲಿದ್ದಾರೆ.
 
2014ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಕಾಶ ರಾಠೋಡ್ ರನ್ನು ಬಿಜೆಪಿಯ ರಮೇಶ ಜಿಗಜಿಣಗಿ 70 ಸಾವಿರ ಮತಗಳಅಂತರದಿಂದ ಸೋಲಿಸಿದ್ದರು. ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ.
 
ಎಲ್ಲ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಈ ಕ್ಷೇತ್ರದಲ್ಲಿ ಪಕ್ಷೇತರರು ಈ ಹಿಂದೆ ಖಾತೆ ತೆರೆದಿದ್ದರು. ಆದರ ಕಳೆದ ಎರಡುದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ.
[$--lok#2019#constituency#karnataka--$]
 
ವಿಜಯಪುರದಲ್ಲಿ 17,95,931 ಮತದಾರರಲ್ಲಿ 9,21,258 ಪುರುಷರು ಹಾಗೂ 8,74,404 ಮಹಿಳೆಯರು ಅಲ್ಲದೇ 269 ಇತರೆ ಮತದಾರರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ