‘ಅಮೆರಿಕಾ ಮಧ್ಯಸ್ಥಿಕೆ ವಹಿಸಿದರೆ ಕಾಶ್ಮೀರ ಕತೆ ಮುಗಿದೇ ಹೋಯ್ತು’

ಭಾನುವಾರ, 23 ಜುಲೈ 2017 (08:25 IST)
ನವದೆಹಲಿ: ಕಾಶ್ಮೀರ ಗಡಿ ವಿಚಾರದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿದ್ದೇ ಆದಲ್ಲಿ ಈ ರಾಜ್ಯದ ಕತೆ ಸಿರಿಯಾ ಅಥವಾ ಇರಾಕ್ ನಂತೆಯೇ ಆದೀತು ಎಂದು ಜಮ್ಮ ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.


‘ಚೀನಾ, ಅಮೆರಿಕಾ ರಾಷ್ಟ್ರಗಳು ಮೊದಲು ತಮ್ಮ ಕೆಲಸ ಮಾಡಿಕೊಳ್ಳಲಿ. ನಮ್ಮ ರಾಷ್ಟ್ರದ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಇಲ್ಲಿನ ಪರಿಸ್ಥಿತಿ ಏನು ಎಂಬುದು ನಮಗೆ ಗೊತ್ತು. ಅವರೆಲ್ಲಾ ಮೂಗು ತೂರಿಸಿದರೆ, ಈ ರಾಜ್ಯದ ಕತೆ ಸಿರಿಯಾ, ಇರಾಕ್ ಮತ್ತು ಆಫ್ಘನ್ ಗೆ ಆದಂತೆ ಆದೀತು’ ಎಂದು ಸಿಎಂ ಮುಫ್ತಿ ಖಾರವಾಗಿ ಹೇಳಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಅಮೆರಿಕಾ ಮಧ್ಯಸ್ಥಿಕೆ ವಹಿಸಬೇಕು ಎಂಬ ಫಾರುಖ್ ಅಬ್ದುಲ್ಲಾ ಹೇಳಿಕೆಯ ಬೆನ್ನಲ್ಲೇ ಸಿಎಂ ಮುಫ್ತಿ ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆಯ ಮೂಲಕವೇ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ..  ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ ಎಂದ ಸೆಹ್ವಾಗ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ