‘ಪಾಕ್ ಅನವಶ್ಯಕವಾಗಿ ದಾಳಿ ನಡೆಸಿದರೆ ಭಾರತೀಯ ಯೋಧರು ಬಿಡುವ ಬುಲೆಟ್ ಗಳಿಗೆ ಲೆಕ್ಕಹಾಕಲಾಗದು’

ಸೋಮವಾರ, 5 ಜೂನ್ 2017 (08:54 IST)
ನವದೆಹಲಿ: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಕ್ಕ ಉತ್ತರ ನೀಡಿದ್ದಾರೆ. ಪಾಕ್ ಅನವಶ್ಯಕವಾಗಿ ದಾಳಿ ನಡೆಸುತ್ತಿದ್ದರೆ, ಭಾರತೀಯ ಯೋಧರ ಗನ್ ನಿಂದ ಉಗುಳುವ ಬುಲೆಟ್ ಗೆ ಲೆಕ್ಕ ಹಾಕಲಾಗದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

 
‘ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪದೇ ಪದೇ ಶಾಂತಿಗೆ ಭಂಗ ತರುತ್ತಿದೆ. ಇದನ್ನು ತುಂಬಾ ಸಮಯ ಸಹಿಸಿಕೊಂಡಿರಲು ಸಾಧ್ಯವಿಲ್ಲ, ಪಾಕ್ ಒಂದು ಬುಲೆಟ್ ಫೈರ್ ಮಾಡದಿರೆ ನಮ್ಮವರು ಲೆಕ್ಕವಿಲ್ಲದಷ್ಟು ಬುಲೆಟ್ ಹೊರಹಾಕಬೇಕಾಗುತ್ತದೆ’ ಎಂದು ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.

ಪಾಕ್ ಪ್ರೇರಿತ ಉಗ್ರರು ಭಾರತದ ಇಬ್ಬರು ಯೋಧರನ್ನು ಹತ್ಯೆ ಮಾಡಿದ ಬೆನ್ನಲ್ಲೇ ರಾಜನಾಥ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಅದರ ಫಲವೇನೋ ಎಂಬಂತೆ ಭಾರತೀಯ ಯೋಧರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ