ನಾಲ್ಕು ಮಕ್ಕಳನ್ನು ಹೊಂದುವ ದಂಪತಿಗೆ ₹1 ಲಕ್ಷ ಬಹುಮಾನ: ಈ ಆಫರ್‌ ಯಾರಿಗೆಲ್ಲ ಸಿಗುತ್ತೆ

Sampriya

ಮಂಗಳವಾರ, 14 ಜನವರಿ 2025 (19:01 IST)
Photo Courtesy X
ಭೋಪಾಲ್: ಮಧ್ಯಪ್ರದೇಶದ ಬ್ರಾಹ್ಮಣ ಮಂಡಳಿಯು ತಮ್ಮ ಸಮುದಾಯದವರಿವೆ ವಿಶೇಷ ಬಹುಮಾನ ಘೋಷಿಸಿದೆ. ನಾಲ್ಕು ಮಕ್ಕಳನ್ನು ಹೆತ್ತ ದಂಪತಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಆಫರ್‌ ನೀಡಿದೆ

ಮಧ್ಯಪ್ರದೇಶ ಸರ್ಕಾರದ ಅಧೀನದಲ್ಲಿರುವ ಬ್ರಾಹ್ಮಣ ಮಂಡಳಿಯು ಯುವ ದಂಪತಿಗಳಿಗೆ ಬಂಪರ್​ ಆಫರ್​ ನೀಡಿದೆ. ಯಾವುದೇ ದಂಪತಿ ನಾಲ್ಕು ಮಕ್ಕಳನ್ನು ಪಡೆದಲ್ಲಿ ಅವರಿಗೆ ಮಂಡಳಿ ಕಡೆಯಿಂದ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದೆ.

ಪರಶುರಾಮ ಕಲ್ಯಾಣ ಮಂಡಳಿಯ (ಬ್ರಾಹ್ಮಣ ಸಮುದಾಯ) ಅಧ್ಯಕ್ಷ ಪಂಡಿತ್​ ವಿಷ್ಣು ರಾಜೋರಿಯಾ ಅವರು ಇಂಥದ್ದೊಂದು ಹೇಳಿಕೆಯನ್ನು ಹೊರಡಿಸಿದ್ದಾರೆ.

ನಮ್ಮ ಕುಟುಂಬಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ್ದರಿಂದ ಸಮಾಜದಲ್ಲಿ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ನಾವು ಕುಟುಂಬವನ್ನು ಬೆಳೆಸಬೇಕಿದೆ ಎಂದು ಇಂದೋರ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.

ಈಗಿನ ಯುವ ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದಬೇಕು. ಈ ಮೂಲಕ ಸಮುದಾಯ ಮತ್ತು ದೇಶ ರಕ್ಷಣೆ ಸಾಧ್ಯವಾಗುತ್ತದೆ. ನನ್ನ ಮಾತನ್ನ ಸಮುದಾಯದ ಯುವಕರು ಎಚ್ಚರಿಕೆಯಿಂದ ಆಲಿಸಬೇಕು. ಒಂದೇ ಮಗು ಹೊಂದುವ ನೀತಿಯಿಂದ ಹೊರಬರಬೇಕು. ಕನಿಷ್ಠ ನಾಲ್ಕು ಮಕ್ಕಳನ್ನು ನೀವು ಹೊಂದಲು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಹಾಗೊಂದು ವೇಳೆ, ಯಾವುದೇ ದಂಪತಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದೇ ಆದಲ್ಲಿ, ಅವರಿಗೆ ಪರಶುರಾಮ ಮಂಡಳಿಯು 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಿದೆ. ನಾನು ಮಂಡಳಿಯ ಅಧ್ಯಕ್ಷನಾಗಿ ಇರುವವರೆಗೂ ಮತ್ತು ಮುಂದಿನ ದಿನಗಳಲ್ಲಿಯೂ ಈ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ