ಕಣಿವೆ ರಾಜ್ಯದಲ್ಲಿ 7 ಉಗ್ರರ ಹತ್ಯೆ: ಓರ್ವ ಯೋಧ ಹುತಾತ್ಮ

ಗುರುವಾರ, 8 ಜೂನ್ 2017 (17:37 IST)
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದ ವಿವಿಧೆಡೆ ಗಡಿನುಸುಳಲು ಯತ್ನಿಸುತ್ತಿದ್ದ ಪ್ರಯತ್ನ ವಿಫಲಗೊಳಿಸಿರುವ ಭಾರತಿಯ ಯೋಧರು, ಕಳೆದ 48ಗಂಟೆಗಳಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ  7 ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ. ಉಗ್ರರು ಹಾಗೂ ಯೋಧರ ನಡುವಿನ ಗುಂಡಿನ ಕಾಳಗದಲ್ಲಿ  ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. 
 
ನೌಗಾಮ್‌ ಸೆಕ್ಟರ್‌ ನಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರ ಯತ್ನವನ್ನು ಬಿಎಸ್‌ಎಫ್ ವಿಫ‌ಲಗೊಳಿಸಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಉಳಿದೆಡೆ ಸೇನೆ ಸಕಾಲಿಕ ದಾಳಿ ನಡೆಸಿ ಐವರು ಉಗ್ರರನ್ನು ಹೊಡೆದುರುಳಿಸಿದೆ. 
 
ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನಷ್ಟು ಉಗ್ರರು ಸ್ಥಳದಲ್ಲಿ ಅಡಗಿರುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಸೇನೆ ಕಾರ್ಯಾಚರಣೆ ಮುಂದುವರೆಸಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

ವೆಬ್ದುನಿಯಾವನ್ನು ಓದಿ