100 ವರ್ಷದ ವೃದ್ಧೆಯ ಮೇಲೆ ಯುವಕನ ಅತ್ಯಾಚಾರ

ಸೋಮವಾರ, 30 ಅಕ್ಟೋಬರ್ 2017 (16:24 IST)
ಮದ್ಯ ಸೇವಿಸಿದ ಮತ್ತಿನಲ್ಲಿದ್ದ ಯುವಕನೊಬ್ಬ 100 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಮೀರತ್ ಜಿಲ್ಲೆಯ ಜಾನಿ ಗ್ರಾಮದಿಂದ ಆಘಾತಕಾರಿ ಘಟನೆ ವರದಿಯಾಗಿದ್ದು, ಅತ್ಯಾಚಾರಕ್ಕೆ ಬಲಿಯಾದ ವೃದ್ಧೆ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಅಂಕಿತ್ ಪುನಿಯಾ ಎಂದು ಗುರುತಿಸಲಾಗಿದೆ. ಮದ್ಯದ ನಶೆಯಲ್ಲಿದ್ದ ಅಂಕಿತ ಅಸಹಾಯಕ ವೃದ್ಧೆಯ ಮೇಲೆ ಎರಗಿ ಅತ್ಯಾಚಾರವೆಸಗಿದ್ದಾನೆ. ವೃದ್ಧೆಯ ಕೂಗಾಟ ಕೇಳಿ ಹೊರಬಂದ ಆಕೆಯ ಸಹೋದರ ಮತ್ತು ನೆರೆಹೊರೆಯವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
 
ಆರೋಪಿ ಅಂಕಿತ ವಿರುದ್ಧ ಅತ್ಯಾಚಾರ ಮತ್ತು ಹತ್ಯೆ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನಾನು ಮುಗ್ದ ಯಾವುದೇ ತಪ್ಪು ಮಾಡಿಲ್ಲ ಎಂದು ಆರೋಪಿ ಅಂಕಿತ ಉಲ್ಟಾ ಹೊಡೆದಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ