ಸಮವಸ್ತ್ರ ಧರಿಸದ್ದಕ್ಕೆ ವಿದ್ಯಾರ್ಥಿನಿಗೆ ಟಾಯ್ಲೆಟ್ ನಲ್ಲಿ ನಿಲ್ಲುವ ಶಿಕ್ಷೆ!

ಸೋಮವಾರ, 11 ಸೆಪ್ಟಂಬರ್ 2017 (08:33 IST)
ನವದೆಹಲಿ: ಶಾಲೆಯೆಂದರೆ ಬೆಚ್ಚಿಬೀಳಿಸುವ ಮತ್ತೊಂದು ಘಟನೆ ವರದಿಯಾಗಿದೆ. ಹೈದರಾಬಾದ್ ನಲ್ಲಿ ಸಮವಸ್ತ್ರ ಧರಿಸದ ವಿದ್ಯಾರ್ಥಿನಿಗೆ ದಿನವಿಡೀ ಬಾಲಕರ ಟಾಯ್ಲೆಟ್ ನಲ್ಲಿ ನಿಲ್ಲುವ ಶಿಕ್ಷೆ ವಿಧಿಸಲಾಗಿದೆ.

 
11 ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಕಿ ಇಂತಹದ್ದೊಂದು ಅಮಾನವೀಯ ಕೃತ್ಯವೆಸಗಿದ್ದಾರೆ. ‘ನನ್ನ  ಸಮವಸ್ತ್ರ ಒಣಗಿರಲಿಲ್ಲ. ಹಾಗಾಗಿ ಸಮವಸ್ತ್ರ ಧರಿಸದೇ ಶಾಲೆಗೆ ಹೋಗಿದ್ದೆ. ನಾನು ತರಗತಿಗೆ ಹೋಗುವಾಗ ನನ್ನನ್ನು ನೋಡಿದ ದೈಹಿಕ ಶಿಕ್ಷಕಿ ಸಮವಸ್ತ್ರ ಧರಿಸದೇ ಬಂದಿದ್ದಕ್ಕೆ ಕೂಗಾಡಿದರು.

ನಾನು ಕಾರಣ ವಿವರಿಸಿದರೂ, ನನ್ನ ಪೋಷಕರು ಇದನ್ನು ನನ್ನ ಶಾಲೆಯ ಡೈರಿಯಲ್ಲಿ ಬರೆದಿದ್ದಾರೆಂದು ಹೇಳಿದರೂ ಆಕೆ ಕೇಳಲಿಲ್ಲ. ಹುಡುಗರ ಟಾಯ್ಲೆಟ್ ನಲ್ಲಿ ನಿಲ್ಲಿಸಿದರು. ಟಾಯ್ಲೆಟ್ ಗೆ ಬಂದಿದ್ದ ಹುಡುಗರು ನನ್ನ ನೋಡಿ ನಗುತ್ತಿದ್ದರು. ಕೊನೆಗೆ ಶಿಕ್ಷಕಿ ನನ್ನನ್ನು ಹೊರ ಕರೆತಂದಳು. ಆದರೆ ಇನ್ನು ನಾನು ಶಾಲೆಗೆ ಹೋಗಲ್ಲ’ ಎಂದು ವಿದ್ಯಾರ್ಥಿನಿ ಈಗ ಅಳುತ್ತಿದ್ದಾಳೆ.

ಘಟನೆ ಬಹಿರಂಗವಾಗುತ್ತಿದ್ದಂತೆ ಹಲವು ಮಕ್ಕಳ ಹಿತರಕ್ಷಣಾ ವೇದಿಕೆಗಳು ಶಾಲೆ ಮತ್ತು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿವೆ.

ಇದನ್ನೂ ಓದಿ.. ಟೀಂ ಇಂಡಿಯಾ ವಿರುದ್ಧ ಸರಣಿ ಆರಂಭಕ್ಕೂ ಮೊದಲೇ ಬಿಳಿ ಬಾವುಟ ಹಾರಿಸಿದ ಆಸೀಸ್ ನಾಯಕ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ