ಬ್ಲೂವೇಲ್ ಗೇಮ್`ನ 6ನೇ ತರಗತಿ ವಿದ್ಯಾರ್ಥಿನಿ: ರಾಜ್ಯದಲ್ಲಿ ಮೊದಲ ಕೇಸ್ ಪತ್ತೆ

ಶುಕ್ರವಾರ, 25 ಆಗಸ್ಟ್ 2017 (11:23 IST)
ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಬ್ಲೂ ವೇಲ್ ಗೇಮ್ ರಾಜ್ಯಕ್ಕೂ ಕಾಲಿಟ್ಟಿದೆ. ಹುಬ್ಬಳ್ಳಿಯ ಶಾಲೆಯೊಂದರ 6ನೇ ತರಗತಿ ವಿದ್ಯಾರ್ಥಿನಿ ಬ್ಲೂವೇಲ್ ಗೇಮ್ ಆಟಕ್ಕೆ ಬಲಿಯಾಗಿ ಕೈ ಕುಯ್ದುಕೊಂಡ ಬಗ್ಗೆ ವರದಿಯಾಗಿದೆ.

ತಕ್ಷಣವೇ ವಿದ್ಯಾರ್ಥಿನಿಯನ್ನ ಗಮನಿಸಿದ ಸಹಪಾಠಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಕ್ಷಕರು ಕರೆದು ವಿಚಾರಿಸಿ ಪೋಷಕರಿಗೆ ಮಾಹಿತಿ ನೀಡಿದ್ದು, ಎಚ್ಚೆತ್ತುಕೊಂಡಿದ್ದಾರೆ. 2013ರಲ್ಲಿ ರಷ್ಯಾದಲ್ಲಿ ಪ್ರಾರಂಭವಾದ ಈ ಗೇಮ್`ನಿಂದ ರಷ್ಯಾದಂತ ಮುಂದುವರೆದ ರಾಷ್ಟ್ರದಲ್ಲಿ 130ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಏನಿದು ಬ್ಲೂವೇಲ್ ಗೇಮ್..?: ಇದೊಂದು ಅನ್ ಲೈನ್ ಗೇಮ್. ಇದನ್ನ ಡೌನ್ ಲೋಡ್ ಮಾಡಿಕೊಂಡ ಮಕ್ಕಳಿಗೆ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತೆ. ಹೀಗೆ 50 ಅಪಾಯಕಾರಿ ಟಾಸ್ಕ್`ಗಳನ್ನ ಮಕ್ಕಳಿಗೆ ನೀಡಲಾಗುತ್ತೆ. ಮಧ್ಯರಾತ್ರಿ ದ್ದು ದೆವ್ವದ ಸಿನಿಮಾ ನೋಡುವುದು, ಕೈಕುಯ್ದುಕೊಳ್ಳುವುದು, ಕಟ್ಟಡದಿಂದ ಹಾರುವುದು, ಇಷ್ಟದ ಪ್ರಾಣಿಯನ್ನ ಕೊಲ್ಲುವುದು ಹೀಗೆ ಅಪಾಯಕಾರಿ ಟಾಸ್ಕ್`ಗಳಿರುತ್ತವೆ. ಮುಬೈನಲ್ಲಿ ಈ ತರಹದ ಕೆಲವು ಪ್ರಕರಣಗಳು ವರದಿಯಾಗಿವೆ. ಈ ಬ್ಲೂವೇಲ್ ಲಿಂಕ್ ತೆಗೆಯುವಂತೆ ಸಾಮಾಜಿಕ ಜಾಲತಾಣಗಳಿಗೆ ಕೋರ್ಟ್ ಆದೇಶ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ