ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಎಷ್ಟನೇ ಸ್ಥಾನ?

ಬುಧವಾರ, 27 ಏಪ್ರಿಲ್ 2022 (15:20 IST)
ನವದೆಹಲಿ :  ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಉಳಿದಿಲ್ಲ.

ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅದಾನಿ ಆಸ್ತಿಯು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ಗೆ ಆಸ್ತಿಗೆ ಸಮನಾಗಿದೆ.

ಬ್ಲೂಮ್ಬರ್ಗ್ ಬಿಲಿಯನೇರ್ಸ್(ಶತಕೋಟ್ಯಧಿಪತಿ) ರಿಯಲ್ ಟೈಂ ಇಂಡೆಕ್ಸ್ ಪ್ರಕಾರ, ಅದಾನಿ ಮತ್ತು ಬಿಲ್ ಗೇಟ್ಸ್ ಇಬ್ಬರೂ 125 ಬಿಲಿಯನ್ ಡಾಲರ್( 9.58 ಲಕ್ಷ ರೂ.)ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಗೌತಮ್ ಅದಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅವರು ಬಿಲ್ ಗೇಟ್ಸ್ಗಿಂತ ಸ್ವಲ್ಪ ಹಿಂದೆ ಇದ್ದಾರೆ.

ಗೌತಮ್ ಅದಾನಿ ಅವರ ಸಂಪತ್ತು ಕೇವಲ ಒಂದೇ ದಿನದಲ್ಲಿ 6.3 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. ಅದಾನಿಯವರ ಸಂಪತ್ತು ಈ ಒಂದೇ ವರ್ಷದಲ್ಲಿ 48.3 ಬಿಲಿಯನ್ ಡಾಲರ್ ಹೆಚ್ಚಾಗಿದೆ.

2021 ರ ಅಂತ್ಯದ ವೇಳೆಗೆ ಗೌತಮ್ ಅದಾನಿ ಅವರ ಆಸ್ತಿ 76.7 ಬಿಲಿಯನ್ ಡಾಲರ್ ಆಗಿತ್ತು. ಅದಾನಿ ಗ್ರೂಪ್ ಆಫ್ ಕಂಪನಿಗಳ ಷೇರು ಬೆಲೆಗಳು ನಿರಂತರವಾಗಿ ಏರುತ್ತಲೇ ಇರುವುದರಿಂದ ಆದಾನಿ ಅವರ ಆಸ್ತಿಯ ಮೌಲ್ಯ ಏರಿಕೆಯಾಗುತ್ತಿವೆ.

ಬಿಲಿಯನೇರ್ಗಳ ಪಟ್ಟಿಯಲ್ಲಿ ಅದಾನಿಗಿಂತ ಮೊದಲಿನ ಸ್ಥಾನದಲ್ಲಿಒ  ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್(19 ಲಕ್ಷ ಕೋಟಿ ರೂ.), ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್(12.5 ಲಕ್ಷ ಕೋಟಿ ರೂ.), ಫ್ರಾನ್ಸಿನ ಉದ್ಯಮಿ ಎಲ್ವಿಎಂಎಚ್ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್(10.2 ಲಕ್ಷ ಕೋಟಿ ರೂ.) ಮತ್ತು ಬಿಲ್ ಗೇಟ್ಸ್ ಹೆಸರುಗಳಿವೆ.

ಆದರೆ ಅವರೆಲ್ಲರ ಆಸ್ತಿ ನಿರಂತರವಾಗಿ ಕುಸಿಯುತ್ತಿದೆ. ಆದರೆ ಅದಾನಿ ನಿರಂತರವಾಗಿ ಏರಿಕೆ ಕಾಣುತ್ತಿದೆ. ಗೌತಮ್ ಅದಾನಿ ಸಂಪತ್ತು ಈ ವೇಗದಲ್ಲೇ ಸಾಗಿದರೆ ಶೀಘ್ರದಲ್ಲೇ ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ