ದೇಶದ ನಂ.1 ಶ್ರೀಮಂತ ಯಾರು ಗೊತ್ತ?
ಸಿಆರ್ಪಿಎಫ್ನ 22 ಕಮಾಂಡೋಗಳು ಅದಾನಿ ಅವರಿಗೆ ಇನ್ನು ಮುಂದೆ ಭದ್ರತೆ ಒದಗಿಸಲಿದ್ದಾರೆ. ಈ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಶುಲ್ಕ ಆಧಾರಿತವಾಗಿದ್ದು, ತಿಂಗಳಿಗೆ ಸುಮಾರು 15 ರಿಂದ 20 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಅದಾನಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ಈ ಭದ್ರತೆ ಒದಗಿಸಲಾಗಿದೆ. ಸಿಆರ್ಪಿಎಫ್ ತಂಡ ಈಗಾಗಲೇ ಕೈಗಾರಿಕೋದ್ಯಮಿಯ ಭದ್ರತೆಯನ್ನು ವಹಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.