ರಷ್ಯಾದಿಂದ ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ

ಶುಕ್ರವಾರ, 17 ಫೆಬ್ರವರಿ 2023 (13:49 IST)
ನವದೆಹಲಿ : ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಸುಮಾರು 13 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
 
ಅಷ್ಟೇ ಅಲ್ಲದೇ ಹತ್ತು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ ಎಂದು ತಿಳಿಸಿದೆ. ಭಾರತ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ರಗಳನ್ನು ರಷ್ಯಾದಿಂದ ಖರೀದಿಸುವ ದೇಶವಾಗಿದೆ. ಖರೀದಿಯ ಆರ್ಡರ್ನಲ್ಲಿ ಶೇ.20 ರಷ್ಟು ಭಾರತದ ಪಾಲಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ಈ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ನಲ್ಲಿ ಶಾಂತಿ ಮಾತುಕತೆಗೆ ಕರೆಕೊಟ್ಟಿದ್ದು ನೇರವಾಗಿ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಲು ಭಾರತಕ್ಕೆ ಸಾಧ್ಯವಾಗಿಲ್ಲ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ