ಹೊಸ ವರ್ಷಾರಂಭದಲ್ಲಿ ಮತ್ತೆ ಯುದ್ಧ

ಭಾನುವಾರ, 18 ಡಿಸೆಂಬರ್ 2022 (07:33 IST)
ಕೀವ್ : ಮುಂಬರುವ ಹೊಸ ವರ್ಷ ಉಕ್ರೇನ್ ಪಾಲಿಗೆ ಕಹಿಯಾಗಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ರಷ್ಯಾ-ಉಕ್ರೇನ್ ಯುದ್ಧ ಮತ್ತೊಮ್ಮೆ ಭೀಕರ ಸ್ವರೂಪಕ್ಕೆ ತಿರುಗುವುದು ಖಚಿವಾಗಿದೆ.

2023ರ ಹೊಸ ವರ್ಷದ ಆರಂಭದಲ್ಲಿ ರಷ್ಯಾದಿಂದ ಮತ್ತೆ ದಾಳಿ ಎದುರಾಗುವ ಬಗ್ಗೆ ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್ ಮುಖ್ಯಸ್ಥ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ರಷ್ಯಾ, ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಸುಮಾರು 2 ಲಕ್ಷ ಸೈನಿಕರನ್ನು ಒಳಗೊಂಡ ಹೊಸ ಸೇನಾಪಡೆಯನ್ನು ಸಿದ್ಧಪಡಿಸುತ್ತಿದೆ. ಕೀವ್ನಲ್ಲಿ ಅಟ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. 

ಉಕ್ರೇನ್ ಸಹ ದಾಳಿಯ ಬಗ್ಗೆ ಎಲ್ಲಾ ಲೆಕ್ಕಾಚಾರ ಮಾಡಿಕೊಂಡಿದೆ. ನಮಗೆ ಎಷ್ಟು ಯುದ್ಧ ಟ್ಯಾಂಕರ್ಗಳು ಬೇಕು? ಫಿರಂಗಿಗಳು ಬೇಕು ಎಲ್ಲ ರೀತಿಯ ಲೆಕ್ಕಾಚಾರ ಮಾಡಿದ್ದೇವೆ.

ಕೆಲ ದಿನಗಳ ಹಿಂದೆಯಷ್ಟೇ ಉಕ್ರೇನ್ ರಷ್ಯಾದ ತೂಗು ಸೇತುವೆಯನ್ನು ಧ್ವಂಸಗೊಳಿಸಿದ ನಂತರ ಉಕ್ರೇನ್ ಭೀಕರ ದಾಳಿಗೆ ತುತ್ತಾಗಿತ್ತು. ರಷ್ಯಾ ಏಕಾಏಕಿ 100 ಕ್ಷಿಪಣಿಗಳು, ಇರಾನಿ ಡ್ರೋನ್ಗಳ ಮೂಲಕ ದಾಳಿ ನಡೆಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ