ಕೇಂದ್ರ ಚುನಾವಣೆ ಆಯೋಗದ ಕ್ರಮವನ್ನು ಪ್ರಶ್ನಿಸಿ ಆಪ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು. ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿ ವಿವರಣೆ ನೀಡಲು ಸಮಯಾವಕಾಶ ಕೋರಿತ್ತು. ಆದರೆ, ತರಾತುರಿಯಲ್ಲಿ ರಾಷ್ಟ್ರಪತಿ ಕೋವಿಂದ್ ಅಂಕಿತ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೇಂದ್ರ ಚುನಾವಣೆ ಆಯೋಗ ಲಾಭದಾಯಕ ಹುದ್ದೆ ಹೊಂದಿದ ಶಾಸಕರ ಅಹವಾಲು ಕೇಳದೆ ಏಕಾಏಕೀ ನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡಿರುವುದು, ರಾಷ್ಟ್ರಪತಿಗಳು ತರಾತುರಿಯಲ್ಲಿ ಅಂಕಿತ ಹಾಕಿರುವ ಹಿಂದೆ ಪ್ರಧಾನಿ ಮೋದಿಯ ಕೈವಾಡವಿದೆ ಎಂದು ಆಪ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.