ಪಂಚರಾಜ್ಯ ಚುನಾವಣೆ: ಪಂಜಾಬ್‌ನಲ್ಲಿಂದು ಮೋದಿ, ರಾಹುಲ್, ಕೇಜ್ರಿ ರ‍್ಯಾಲಿ

ಶುಕ್ರವಾರ, 27 ಜನವರಿ 2017 (10:55 IST)
ಪಂಜಾಬ್ ಚುನಾವಣೆಗೆ ಕೇವಲ 1 ವಾರ ಬಾಕಿ ಉಳಿದಿದ್ದು ನಾಲ್ಕು ದೊಡ್ಡ ಪಕ್ಷಗಳು ಮತದಾರರನ್ನು ಸೆಳೆಯಲು ಭರ್ಜರಿ ಪ್ರಚಾರವನ್ನು ಆರಂಭಿಸಿವೆ. 
ವರದಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಇಂದು ಪಂಜಾಬ್‌‌ನಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ. 
 
ಪ್ರಧಾನಿ ಮೋದಿ ಜಲಂಧರ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಯಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅವರು ಅಕಾಲಿ-ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಜನವರಿ 29ರಿಂದ ಲುಧಿಯಾನಾದಲ್ಲವರು ಇನ್ನೊಂದು ರ‍್ಯಾಲಿಯನ್ನು ನಡೆಸಲಿದ್ದಾರೆ. 
 
ಪ್ರಧಾನಿ ಹೊರತಾಗಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಮಲಾಲ್, ನರೇಂದ್ರ ತೋಮರ್, ಅವಿನಾಶ್ ರೈ ಖನ್ನಾ ಬಿಜೆಪಿ ಅಭ್ಯರ್ಥಿಗಳಿಗಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. 
 
ಅರವಿಂದ ಕೇಜ್ರಿವಾಲ್ ಮಧ್ಯಾಹ್ನ 12ಗಂಟೆಗೆ ಪಟಿಯಾಲಾದಲ್ಲಿ ರ‍್ಯಾಲಿಯನ್ನು ನಡೆಸಲಿದ್ದಾರೆ. 
 
ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಮೂರು ದಿನಗಳ ಕಾಲ ಪಂಜಾಬ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದವರು  ಅಮೃತಸರ್ ಮತ್ತು ಮಜಿಥಾಗಳಲ್ಲಿ ರ‍್ಯಾಲಿಯನ್ನು ನಡೆಸಲಿದ್ದಾರೆ. 
 
ಪಂಜಾಬ್‌ನಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯುತ್ತಿದ್ದು ಮಾರ್ಚ್ 11 ರಂದು ಮತ ಎಣಿಕೆ ನಡೆಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ