ಆತ್ಮಹತ್ಯೆಗೆ ಶರಣಾದ ರಾಷ್ಟ್ರಮಟ್ಟದ ಆಟಗಾರ್ತಿ

ಶನಿವಾರ, 28 ಜನವರಿ 2017 (10:52 IST)
ರಾಷ್ಟ್ರೀಯ ಈಜುಪಟು ತನಿಕಾ ಧಾರಾ  ಕೇಂದ್ರ ಮುಂಬೈನಲ್ಲಿರುವ ಲೋವರ್ ಪರೆಲ್‌ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. 23 ವರ್ಷದ ತನಿಕಾ ಪಶ್ಚಿಮ ರೈಲ್ವೆಯಲ್ಲಿ ಕಿರಿಯ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. 

2015ರಲ್ಲಿ ತಿರುವನಂತಪುರಮ್‌ನಲ್ಲಿ ನಡೆದ 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ತನಿಕಾ 70ನೇ ರಾಷ್ಟ್ರೀಯ ಈಜು ಚಾಂಪಿಯನ್ ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 
 
ಶುಕ್ರವಾರ ಆಕೆಯ ಮನೆಗೆ ಬಂದ ಸ್ನೇಹಿತೆ ಒಳಗಡೆಯಿಂದ ಬಾಗಿಲು ಹಾಕಿರುವುದನ್ನು ನೋಡಿ ಪೋನ್ ಕರೆ ಮಾಡಿದ್ದಾಳೆ. ಆದರೆ ತನಿಕಾ ಫೋನ್ ಕರೆ ಸ್ವೀಕರಿಸದಿದ್ದಾಗ ನೆರೆಹೊರೆಯವರ ಸಹಾಯದಿಂದ ಕದ ಒಡೆದು ನೋಡಿದಾಗ ಕಿಟಕಿಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. 
 
ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. 
 
ಕೋಲ್ಕತ್ತಾದಲ್ಲಿ ವಾಸವಾಗಿರುವ ಆಕೆಯ ಪೋಷಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ