25 ವರ್ಷದ ಮಹಿಳೆಯ ಮೇಲೆ ನಾದಿನಿಯರ ಗಂಡಂದಿರಿಂದ ಅತ್ಯಾಚಾರ

ಮಂಗಳವಾರ, 12 ಮಾರ್ಚ್ 2019 (12:15 IST)
ಹೈದರಾಬಾದ್ : ಇಬ್ಬರು ಮಕ್ಕಳನ್ನು ಕೂಡಿ ಹಾಕಿ 25 ವರ್ಷದ ಮಹಿಳೆಯ ಮೇಲೆ ಆಕೆಯ ನಾದಿನಿಯರ ಗಂಡಂದಿರೇ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.


ಆಟೋ ಡ್ರೈವರ್ ಆಗಿರುವ ಮಹಿಳೆಯ ಗಂಡ ರಾತ್ರಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ, ಆಕೆಯ ನಾದಿನಿಯರ ಗಂಡಂದಿರು ಮೂವರು ಸೇರಿಕೊಂಡು ಮಕ್ಕಳನ್ನು ಪಕ್ಕದ ಕೋಣೆಯಲ್ಲಿ ಕೂಡಿ ಹಾಕಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿ ಒಬ್ಬರಾದ ಮೇಲೆ ಒಬ್ಬರಂತೆ ಆಕೆಯ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.


ಮರುದಿನ ಪತಿ ಬಂದ ತಕ್ಷಣ ಮಹಿಳೆ ನಡೆದ ಘಟನೆಯನ್ನು ತಿಳಿಸಿದ್ದು, ಕೂಡಲೆ ಅವರಿಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿರುವ ಮಾಹಿತಿಯ ಮೇರೆಗೆ ಜಾಲ ಬೀಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ