ಕೇಂದ್ರದ ಬೆನ್ನಲ್ಲೇ ಈ ಮೂರು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ!

ಭಾನುವಾರ, 22 ಮೇ 2022 (14:37 IST)

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ ಮೂರು ರಾಜ್ಯಗಳು ಅಬಕಾರಿ ಸುಂಕ ಕಡಿತ ಮಾಡಿ ತಮ್ಮ ರಾಜ್ಯದ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿವೆ.

ಕೇಂದ್ರ ಸರಕಾರ ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 8 ರೂ. ಹಾಗೂ ಡೀಸೆಲ್ ಲೀಟರ್ ಗೆ 6 ರೂ. ಕಡಿತ ಮಾಡಿತ್ತು.

ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ ರಾಜಸ್ಥಾನ್, ಒಡಿಶಾ ಮತ್ತು ಕೇರಳ ಸರಕಾರಗಳು ಅಬಕಾರಿ ಸುಂಕ ಕಡಿತ ಘೋಷಿಸಿವೆ.

ಕೇರಳ ಸರಕಾರ ಪೆಟ್ರೋಲ್ ಮೇಲೆ ಲೀಟರ್ ಗೆ 2.41 ರೂ. ಹಾಗೂ ಡೀಸೆಲ್ ಲೀಟರ್ ಗೆ 1.36 ರೂ. ಅಬಕಾರಿ ಸುಂಕ ಕಡಿತ ಮಾಡುವುದಾಗಿ ಘೋಷಿಸಿದೆ.

ರಾಜಸ್ಥಾನ್ ಸರಕಾರ ಪೆಟ್ರೋಲ್ ಲೀಟರ್ ಗೆ 2.48 ರೂ. ಹಾಗೂ ಡೀಸೆಲ್ ಲೀಟರ್ ಗೆ 1.16 ರೂ. ವ್ಯಾಟ್ ಕಡಿತಗೊಳಿಸಿದ್ದರೆ, ಒಡಿಶಾ ಸರಕಾರ ಪೆಟ್ರೋಲ್ ಲೀಟರ್ ಗೆ 2.23 ರೂ. ಹಾಗೂ ಡೀಸೆಲ್ ಲೀಟರ್ ಗೆ 1.36 ರೂ. ವ್ಯಾಟ್ ಕಡಿತ ಮಾಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ