ಒಡಿಶಾ: ಇಲ್ಲಿನ ಪುರಿ ಬಳಿ ಮಂಗಳವಾರ ಬೆಳಗ್ಗೆ 6.10 ಗಂಟೆಗೆ 5.1 ತೀವ್ರತೆಯ ಭೂಕಂಪವು ದಾಖಲಾಗಿದೆ ಎಂದು ಐಎಂಡಿ ಅಧಿಕಾರಿ ಕೋಲ್ಕತ್ತಾದಲ್ಲಿ ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ 91 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಒಡಿಶಾದ ಪುರಿ ಬಳಿ ಬಂಗಾಳ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನವು ಅಕ್ಷಾಂಶ 19.52 N ಮತ್ತು ರೇಖಾಂಶ 88.55 E ನಲ್ಲಿ ದಾಖಲಾಗಿದೆ ಎಂದು IMD ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಆಸ್ತಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ, ಒಡಿಶಾ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಭೂಕಂಪದ ಕೇಂದ್ರವು ಬಂಗಾಳಕೊಲ್ಲಿಯಲ್ಲಿ ಇರುವುದರಿಂದ ಅದರ ಪರಿಣಾಮವು "ನಗಣ್ಯ" ಎಂದು ಹೇಳಿದರು.
ಒಡಿಶಾದ ಪರದೀಪ್, ಪುರಿ, ಬರ್ಹಾಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅವರು ಹೇಳಿದರು.